ಸಿಡಿಲು ಬಡಿದು ಮತದಾನಕ್ಕೆ ಅಡ್ಡಿ

thunderbolt strike polling disruption
Published on

ಖಾನಾಪುರ: ತಾಲೂಕಿನ ಹೇಮಡಗಾ ಶಾಲೆಯ ಮತಗಟ್ಟೆಗೆ ಬುಧವಾರ ಸಿಡಿಲು ಬಡಿದು ಮತಯಂತ್ರಗಳು ಸ್ಥಗಿತಗೊಂಡವು. ಇದರಿಂದ ಒಂದು ಗಂಟೆ ಮತದಾನ ಪ್ರಕ್ರಿಯೆ ತಡವಾಗಿ ಪ್ರಾರಂಭವಾಯಿತು. ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ-ಗಾಳಿಯಾಗಿದ್ದರಿಂದ ವಿದ್ಯುತ್ ಕೂಡ ಕೈ ಕೊಟ್ಟಿತು.

ಮತಗಟ್ಟೆ ಸಿಬ್ಬಂದಿ ಬೇರೆ ಇವಿಎಂ ವ್ಯವಸ್ಥೆ ಮಾಡುವ ಮೂಲಕ ಮತದಾನಕ್ಕೆ ಅನುವು ಮಾಡಿಕೊಟ್ಟರು. ಜತೆಗೆ ಸಡಾ, ದೇವಲತ್ತಿ, ಕಾರ್ಲಗಾ, ಇಟಗಿ, ನಂದಗಡ, ಜಾಡನಾವಗೆ, ಹಲಕರ್ಣಿ, ರುಮೇವಾಡಿ, ನೇರಸೆ ಸೇರಿ ಪಟ್ಟಣದಲ್ಲೂ ವಿವಿ ಪ್ಯಾಟ್ ಯಂತ್ರಗಳು ಸ್ಥಗಿತಗೊಂಡು, ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಮತದಾನ ಪ್ರಾರಂಭಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net