ಸರ್ಕಾರಿ ವಾಹನಕ್ಕೆ ತಡೆಯೊಡ್ಡಿ ಬೆದರಿಕೆ ಆರೋಪಿ ಅಂದರ್

IMG-20220716-WA0034
Published on


ಮಂಗಳೂರು: ನಗರದ ಹೊರ ವಲಯದ ತುಂಬೆಯಲ್ಲಿ ಸರ್ಕಾರಿ ವಾಹನವನ್ನು ತಡೆದು ನಿಲ್ಲಿಸಿ, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಕಾರಿನ ಸೈಡ್ ಮಿರರ್ ಮುರಿದು ಹಾಕಿದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಸಜಿಪನಡು ಗ್ರಾಮದ ಕೋಣಿಮಾರ್ ಸಂಶುದ್ದೀನ್ (22) ಬಂಧಿತ ಆರೋಪಿ. ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ನಡೆಯುತ್ತಿದ್ದ ಸಭೆಗೆ ಲೆಕ್ಕಾಧಿಕಾರಿ ವಿದ್ಯಾ ನಿತ್ಯಾನಂದ ಚಿಂಬಾಳ್ಕರ್ ಹಾಗೂ ಲೆಕ್ಕಾಧಿಕ್ಷಕಿ ಶುಭಾ ಕುಮಾರಿ ಅವರು ತೆರಳುತ್ತಿದ್ದರು. ಎದುರಿನಿಂದ ಹೋಗುತ್ತಿದ್ದ ವಾಹನದ ಚಾಲಕರು  ರಸ್ತೆ ಗುಂಡಿಯನ್ನು ತಪ್ಪಿಸಲು ಏಕಾಏಕಿ ನಿಧಾನ ಮಾಡಿದಾಗ ಕಾರು ಚಾಲಕ ದೇವದಾಸ್ ಕೂಡಾ ನಿಧಾನ ಮಾಡಿದ್ದಾರೆ. ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಸವಾರ ಆಕ್ರೋಶಗೊಂಡು ಕಾರಿಗೆ ಅಡ್ಡ ಇಟ್ಟು ಕಾರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ. ಕಾರಿನ ಸೈಡ್ ಮಿರರ್ ಹುಡಿ ಮಾಡಿ, ಬೋನೆಟ್‌ಗೆ ಗುದ್ದಿದ್ದಾನೆ. ಈ ಘಟನೆಯನ್ನು ಇನ್ನೊಂದು ವಾಹನದಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಆರೋಪಿಯನ್ನು ತಕ್ಷಣ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net