ಸ್ವಿಟ್ಜರ್ಲೆಂಡ್‌ನ ಜಿಸಿಎಲ್‌ಎಸ್ ಜೊತೆಗೆ ತುಂಬೆ ಗ್ರೂಪ್ ಒಪ್ಪಂದಕ್ಕೆ ಸಹಿ

 ತುಂಬೆ ಗ್ರೂಪ್, ಸ್ವಿಟ್ಜರ್ಲೆಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ (ಜಿಸಿಎಲ್‌ಎಸ್) ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ (ಎಮ್‌ಒಯು) ಸಹಿ ಹಾಕಿತು. ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನ ಡಾ. ಡೊಮಿನಿಕ್ ಥಾರ್, ತುಂಬೆ ಗ್ರೂಪ್ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಇದ್ದರು.
ತುಂಬೆ ಗ್ರೂಪ್, ಸ್ವಿಟ್ಜರ್ಲೆಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ (ಜಿಸಿಎಲ್‌ಎಸ್) ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ (ಎಮ್‌ಒಯು) ಸಹಿ ಹಾಕಿತು. ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನ ಡಾ. ಡೊಮಿನಿಕ್ ಥಾರ್, ತುಂಬೆ ಗ್ರೂಪ್ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೀರ್ಘಾಯುಷ್ಯದ ವೈದ್ಯಕೀಯ ವಿಜ್ಞಾನದಲ್ಲಿ ಮೈಲಿಗಲ್ಲು

ಮಂಗಳೂರು: ತುಂಬೆ ಗ್ರೂಪ್, ಸ್ವಿಟ್ಜರ್ಲೆಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ (ಜಿಸಿಎಲ್‌ಎಸ್) ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ (ಎಮ್‌ಒಯು) ಸಹಿ ಹಾಕಿದೆ.

ಇದರೊಂದಿಗೆ ನೂತನವಾಗಿ ಸ್ಥಾಪಿಸಲಾದ "ತುಂಬೆ ಇನ್ಸ್ಟಿಟ್ಯೂಟ್ ಆಫ್ ಲಾಂಗ್ವಿಟಿ ಮೆಡಿಸಿನ್" ಮೂಲಕ ಲಾಂಗ್ವಿಟಿ ಮೆಡಿಸಿನ್ (ದೀರ್ಘಾಯುಷ್ಯದ ವೈದ್ಯಕೀಯ ವಿಜ್ಞಾನ), ಹೆಲ್ತಿ ಏಜಿಂಗ್ (ಆರೋಗ್ಯಕರ ವಯಸ್ಸಾಗುವಿಕೆ), ಪ್ರಿವೆಂಟಿವ್ ಹೆಲ್ತ್‌ಕೇರ್ (ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆ) ಮತ್ತು ಪ್ರೆಸಿಷನ್ ಹೆಲ್ತ್ (ನಿಖರ ಆರೋಗ್ಯ) ಕ್ಷೇತ್ರಗಳಲ್ಲಿ ವ್ಯವಸ್ಥಿತ ಶೈಕ್ಷಣಿಕ ಶಿಕ್ಷಣವನ್ನು ಪರಿಚಯಿಸುತ್ತಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೊದಲ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಪಾಲುದಾರಿಕೆಯು, ಲಾಂಗ್ವಿಟಿ ಸೈನ್ಸ್‌ಗಾಗಿ ಮಾತ್ರವೇ ಮೀಸಲಾಗಿರುವ ವಿಶ್ವದ ಮೊದಲ ಉನ್ನತ ಶಿಕ್ಷಣ ಸಂಸ್ಥೆಯಾದ ಜಿಸಿಎಲ್‌ಎಸ್ ಮತ್ತು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಶೈಕ್ಷಣಿಕ ಶ್ರೇಷ್ಠತೆಯನ್ನು ಒಂದೆಡೆ ತರುತ್ತದೆ. ಜೊತೆಗೆ ತುಂಬೆ ಹೆಲ್ತ್‌ಕೇರ್‌ನ ವ್ಯಾಪಕವಾದ ಕ್ಲಿನಿಕಲ್ ಪರಿಸರ ವ್ಯವಸ್ಥೆಯ ಬೆಂಬಲದೊಂದಿಗೆ, ಮಧ್ಯಪ್ರಾಚ್ಯದಾದ್ಯಂತ ಲಾಂಗ್ವಿಟಿ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಮುನ್ನಡೆಸಲು ಒಂದು ವಿಶಿಷ್ಟ ವೇದಿಕೆಯನ್ನು ಸೃಷ್ಟಿಸುತ್ತದೆ.

ಈ ಸಹಯೋಗದ ಭಾಗವಾಗಿ, ತುಂಬೆ ಇನ್ಸ್ಟಿಟ್ಯೂಟ್ ಆಫ್ ಲಾಂಗ್ವಿಟಿ ಮೆಡಿಸಿನ್ ಸಂಸ್ಥೆಯು ಜಿಸಿಎಲ್‌ಎಸ್‌ನ ಶೈಕ್ಷಣಿಕ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾದ ಆರು ವೃತ್ತಿಪರ ಪ್ರಮಾಣಪತ್ರ ಕೋರ್ಸ್‌ಗಳನ್ನು ಪ್ರಾರಂಭಿಸಲಿದೆ. ಪ್ರತಿ ಕಾರ್ಯಕ್ರಮವನ್ನು ಮೂರು ತಿಂಗಳ ಅವಧಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುವುದು ಮತ್ತು ಪ್ರತಿ ಕಾರ್ಯಕ್ರಮಕ್ಕೆ ಆರಂಭದಲ್ಲಿ ಸುಮಾರು 100 ಅಭ್ಯರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು.

ವೈದ್ಯರು, ಫಾರ್ಮಸಿಸ್ಟ್‌ಗಳು, ದಾದಿಯರು (ನರ್ಸ್‌ಗಳು), ಫಿಸಿಯೋಥೆರಪಿಸ್ಟ್‌ಗಳು, ನ್ಯೂಟ್ರಿಷನಿಸ್ಟ್‌ಗಳು, ಫಿಟ್‌ನೆಸ್ ವೃತ್ತಿಪರರು ಮತ್ತು ಇತರ ಸಂಬಂಧಿತ ಆರೋಗ್ಯ ವೈದ್ಯರಿಗಾಗಿ ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮಗಳು, ಸ್ವಿಸ್ ಶೈಕ್ಷಣಿಕ ಪರಿಣತಿಯನ್ನು ಜಿಎಂಯು ಶೈಕ್ಷಣಿಕ ಶ್ರೇಷ್ಠತೆ, ಕ್ಲಿನಿಕಲ್ ಫ್ಯಾಕಲ್ಟಿ, ಸಿಮ್ಯುಲೇಶನ್ ಸೌಲಭ್ಯಗಳು ಮತ್ತು ಸಂಯೋಜಿತ ಅಕಾಡೆಮಿಕ್ ಹೆಲ್ತ್ ಸಿಸ್ಟಮ್‌ನೊಂದಿಗೆ ಸಂಯೋಜಿಸುತ್ತವೆ.

50ಕ್ಕೂ ಹೆಚ್ಚು ಕಾರ್ಯಕ್ರಮಗಳೊಂದಿಗೆ 2026-27ರ ವಿದ್ಯಾರ್ಥಿ ಬ್ಯಾಚ್‌ಗೆ ಪ್ರವೇಶಾತಿ ಮುಕ್ತವಾಗಿದ್ದು, ಸೆಪ್ಟೆಂಬರ್/ಅಕ್ಟೋಬರ್ 2026ರ ಮೊದಲ ಕೋಹಾರ್ಟ್‌ಗಾಗಿ ಅರ್ಜಿಗಳು ಈಗಾಗಲೇ ಲಭ್ಯವಿವೆ. ಹೆಚ್ಚಿನ ವಿವರಗಳು ತುಂಬೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ.

ಆರು ವೃತ್ತಿಪರ ಪ್ರಮಾಣಪತ್ರ ಕೋರ್ಸ್

ಕ್ಲಿನಿಕಲ್ ಲಾಂಗ್ವಿಟಿ ಮೆಡಿಸಿನ್‌ನಲ್ಲಿ ತುಂಬೆ ಪ್ರೊಫೆಷನಲ್ ಸರ್ಟಿಫಿಕೇಟ್\

ಲಾಂಗ್ವಿಟಿ ಫಿಸಿಯೋಥೆರಪಿಯಲ್ಲಿ ತುಂಬೆ ಪ್ರೊಫೆಷನಲ್ ಸರ್ಟಿಫಿಕೇಟ್

ಲಾಂಗ್ವಿಟಿ ನ್ಯೂಟ್ರಿಷನ್‌ನಲ್ಲಿ ತುಂಬೆ ಪ್ರೊಫೆಷನಲ್ ಸರ್ಟಿಫಿಕೇಟ್

ಲಾಂಗ್ವಿಟಿ ಫಿಟ್‌ನೆಸ್‌ನಲ್ಲಿ ತುಂಬೆ ಪ್ರೊಫೆಷನಲ್ ಸರ್ಟಿಫಿಕೇಟ್

ಪೆಪ್ಟೈಡ್ ಮೆಡಿಸಿನ್‌ನಲ್ಲಿ ತುಂಬೆ ಪ್ರೊಫೆಷನಲ್ ಸರ್ಟಿಫಿಕೇಟ್

ಹೆಲ್ತ್‌ಕೇರ್‌ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನಲ್ಲಿ ತುಂಬೆ ಪ್ರೊಫೆಷನಲ್ ಸರ್ಟಿಫಿಕೇಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net