ಬಾಲಪ್ರತಿಭೆಗಳಿಂದ ಗಮನಾರ್ಹ ಸಾಧನೆ, ತುಳು ಭಾವಗೀತೆ ಬಿಡುಗಡೆಗೊಳಿಸಿ ಪ್ರೊ.ಪಿ.ಕೃಷ್ಣಮೂರ್ತಿ ಶ್ಲಾಘನೆ

bhavageethe
ತುಳು ಭಾವಗೀತೆ ಮುದ್ರಿಕೆಯನ್ನು ಭಾಸ್ಕರ ರೈ ಕುಕ್ಕುವಳ್ಳಿ ಬಿಡುಗಡೆಗೊಳಿಸಿದರು. ಪ್ರೊ.ಪಿ.ಕೃಷ್ಣಮೂರ್ತಿ, ವಿನಮ್ರ ಇಡ್ಕಿದು, ವಿದ್ಯಾ ಯು., ರಘು ಇಡ್ಕಿದು ಉಪಸ್ಥಿತರಿದ್ದರು.
Published on

ಮಂಗಳೂರು: ತುಳುವಿಗೆ ಹೊಸ ಗಾಯಕರು ಮತ್ತು ಹೊಸ ಭಾವಗೀತೆಗಳು ಬರಬೇಕಾದ ಅಗತ್ಯ ಇಂದಿನ ದಿನಗಳಲ್ಲಿ ಬಹುಮುಖ್ಯ. ಈ ನಿಟ್ಟಿನಲ್ಲಿ ಬಾಲಪ್ರತಿಭೆಗಳು ಗಮನ ಸೆಳೆಯುವ ಸಾಧನೆ ಮಾಡುತ್ತಿದ್ದಾರೆ ಎಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಹೇಳಿದರು.

ನಗರದ ಖಾಸಗಿ ಸಭಾಭವನದಲ್ಲಿ ಗುರುವಾರ ‘ಮೋಕೆ ಜೋಕೆ’ ತುಳು ಭಾವಗೀತೆಯ ಆಡಿಯೋ-ವಿಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ತುಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಹಾಡನ್ನು ಬಿಡುಗಡೆಗೊಳಿಸಿ, ಹಸಿ ಗೋಡೆಗೆ ಕಲ್ಲು ಹೊಡೆದರೆ ಹೇಗೆ ಗಟ್ಟಿಯಾಗಿ ನಿಲ್ಲುತ್ತದೆಯೋ ಹಾಗೆಯೇ ಎಳೆಯ ಪ್ರಾಯದಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಅವರು ಚೆನ್ನಾಗಿ ಬೆಳೆಯುತ್ತಾರೆ. ಕಲಿಕೆಯ ಜತೆ ಜತೆಗೆ ಮಕ್ಕಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಅವರ ವ್ಯಕ್ತಿತ್ವ ಚೆನ್ನಾಗಿ ರೂಪುಗೊಳ್ಳುತ್ತದೆ ಎಂದರು.

ಭಾವಗೀತೆಯ ಗಾಯಕ ವಿನಮ್ರ ಇಡ್ಕಿದು, ನಿರ್ದೇಶಕಿ ವಿದ್ಯಾ ಯು. ಉಪಸ್ಥಿತರಿದ್ದರು. ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net