ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದಲ್ಲಿ ಯುವಕರ ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಯಾಗಿದೆ. ಸೋಮಶೇಖರ್ ಹಲ್ಲೆಗೆ ಒಳಗಾದವ. ನಾಹೀದ್ ಹಲ್ಲೆ ಆರೋಪಿ.
ಸೋಮಶೇಖರ್ ಪ್ರೀತಿಸುತ್ತಿದ್ದ ಯುವತಿ ಇತ್ತೀಚೆಗೆ ನಾಹೀದ್ ಜತೆ ಗೆಳೆತನ ಬೆಳೆಸಿದ್ದಳು ಎನ್ನಲಾಗಿದೆ. ಈ ಬಗ್ಗೆ ಸೋಮಶೇಖರ್, ಯುವತಿಯನ್ನು ಪ್ರಶ್ನಿಸಿದ್ದ. ಈ ವಿಷಯ ತಿಳಿದ ನಾಹೀದ್ ಗುಂಪು ಕಟ್ಟಿಕೊಂಡು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.