ಜ್ಞಾನೋಪದೇಶದಿಂದ ಸದ್ಗತಿ ಪ್ರಾಪ್ತಿ

16Ckd2
Published on

ಚಿಕ್ಕೋಡಿ: ಜ್ಞಾನ ಉಪದೇಶದಿಂದ ಅಜ್ಞಾನದ ಕತ್ತಲೆ ದೂರ ಮಾಡುವುದರಿಂದ ಸದ್ಗತಿ ಪ್ರಾಪ್ತಿಯಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಸತೀಶ ಕುಮಾರ ಗವತಿ ಹೇಳಿದರು.

ತಾಲೂಕಿನ ಮಜಲಟ್ಟಿ ಗ್ರಾಮದ ಸದ್ಗುರು ಕಲ್ಮೇಶ್ವರ ಅಲ್ಲಮಪ್ರಭು ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಕೀಲ ಲಗಮಣ್ಣ ತೋರಣಹಳ್ಳಿ ಮಾತನಾಡಿ, ಗುರು ಶಿಷ್ಯರ ಸಂಬಂಧ ಹಾಲು ಜೇನಿನಂತಿದ್ದರೆ ಮೋಕ್ಷದ ದಾರಿಗೆ ಮಾರ್ಗವಾಗುತ್ತದೆ. ಗುರು ಪರಂಪರೆ ಮುನ್ನಡೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.

ಸಾವಿತ್ರಮ್ಮ ಪಾಟೀಲ, ಶರತ ಪಾಟೀಲ, ಭರತ ಪಾಟೀಲ, ವಿಜಯ ವಾಗಮಾರೆ, ಮಲಗೌಡ ಚಿಮಣೆ, ಬಸವಪ್ರಭು ಇತರರಿದ್ದರು. ಸುಜಾತ ಮಗದುಮ್ಮ, ಸುಪ್ರಿಯಾ ಕಲಾಚಂದ್ರ ನಿರೂಪಿಸಿದರು. ಬಸವರಾಜ ಹಲಗೇಕರ, ಸಂತ್ರಾಮ ಮಯೂರ, ಪರಶುರಾಮ ಕುರಣೆ ವಾದ್ಯ ಸಾಕಾರ ನೀಡಿದರು. ಭರತ ಕಲಾಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net