ವಚನಗಳ ಅಧ್ಯಯನದಿಂದ ಶರಣರ ದರ್ಶನ

22ATHANIGRAMIN1
ಸುಟ್ಟಟ್ಟಿ ಗ್ರಾಮದಲ್ಲಿ ಶ್ರೀ ಅಪ್ಪಯ್ಯ ಮಹಾಶಿವಯೋಗಿಗಳ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಡಾ.ವಿವೇಕಾನಂದ ದೇವರು, ಶಿವಬಸವ ದೇವರು, ಅಪ್ಪಯ್ಯ ಮಠಪತಿ ಹಾಗೂ ಇತರರು ಪಾಲ್ಗೊಂಡಿದ್ದರು.
Published on

ಅಥಣಿ ಗ್ರಾಮೀಣ: ಮನುಷ್ಯನ ಜೀವನ ಸುಖಮಯವಾಗಿ ಸಾಗಬೇಕಾದರೆ ದಾನ, ಧರ್ಮದ ಜತೆಗೆ ಶರಣರ, ಸಂತರ, ದಾರ್ಶನಿಕರ ನುಡಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಗುಣದಾಳ ಕಲ್ಯಾಣೇಶ್ವರ ಮಠದ ಡಾ.ವಿವೇಕಾನಂದ ದೇವರು ಹೇಳಿದರು.

ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಶ್ರೀಅಪ್ಪಯ್ಯ ಮಹಾ ಶಿವಯೋಗಿಗಳ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಎದುರಾಗುವ ಕಷ್ಟ, ಬೇಸರ ಪರಿಸ್ಥಿತಿಗಳಿಗೆ ಎದೆಗುಂದದೆ ವಚನಗಳ ಅಧ್ಯಯನ ಮಾಡಬೇಕು. ಆಗ ಶರಣರ ಹಾಗೂ ಆಧ್ಯಾತ್ಮ ಮತ್ತು ಲೌಕಿಕಗಳ ಸಮನ್ವಯ ದರ್ಶನವಾಗುತ್ತದೆ. ನಕಾರಾತ್ಮಕ ಚಿಂತನೆ ಹೋಗಲಾಡಿಸಿ. ಚೈತನ್ಯದ ಚಿಲುಮೆ ಹೊತ್ತಿಸುವುದೇ ಪ್ರವಚನದ ಉದ್ದೇಶ ಎಂದರು.

ಸೋಲಾಪುರದ ಶಿವಬಸವ ದೇವರು ಆಶೀರ್ವಚನ ನೀಡಿದರು. ಯಲ್ಲಮ್ಮದೇವಿ ದೇವಸ್ಥಾನ ಬಳಿ ಶ್ರೀಗಳನ್ನು ಬರಮಾಡಿಕೊಂಡರು. ನೂರಾರು ಸುಮಂಗಲೆಯರು ಕುಂಭಾರತಿ ಹಿಡಿದು ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಅಪ್ಪಯ್ಯ ಮಹಾ ಶಿವಯೋಗಿಗಳ ದೇವಸ್ಥಾನಕ್ಕೆ ಕರೆತಂದು ಪೂಜೆ ಸಲ್ಲಿಸಲಾಯಿತು.

ಅರ್ಚಕ ಅಪ್ಪಯ್ಯ ಮಠಪತಿ, ಪರಸಪ್ಪ ಅವಟಿ, ರಾಮಪ್ಪ ಕುರಣಿ, ಭೀಮಪ್ಪ ಸವದಿ, ವಿಠ್ಠಲ ಪಾತ್ರಿ, ಸಂಜು ಚವ್ಹಾಣ, ಶಂಕರ ಸವದಿ, ಗ್ರಾಪಂ ಅಧ್ಯಕ್ಷ ಬಸವರಾಜ ಕಂಕಣವಾಡಿ, ಪ್ರಕಾಶ ಅಂಗಡಿ, ಸದಾಶಿವ ಬಿರಾದಾರ, ಮಲ್ಲಪ್ಪ ಕಾರ್ತಳ ಇತರರಿದ್ದರು. ಸಂಜು ಅವಟಿ ಸ್ವಾಗತಿಸಿದರು. ಎಂ.ಆರ್. ಸವದಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net