ಕ್ರೀಡೆಯಿಂದ ದೇಹ ಸದೃಢ

6Athanigrameen1
Published on

ಅಥಣಿ ಗ್ರಾಮೀಣ: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ವೃದ್ಧಿ ಜತೆಗೆ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಬರುತ್ತದೆ ಎಂದು ರೇಣುಕಾ ಸಕ್ಕರೆ ಕಾರ್ಖಾನೆ ಜಿಎಂ ಅಭಯಕುಮಾರ ಖೋತ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀಮತಿ ಶಾಂತಾಬಾಯಿ ದೇಶಪಾಂಡೆ ಸಿಬಿಎಸ್‌ಸಿ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆಯನ್ನು ಗೌರವಿಸಬೇಕು. ಸಮಯ ಪಾಲನೆಗೆ ಆದ್ಯತೆ ನೀಡಬೇಕು. ನಿಯಮಗಳಿಗೆ ಬದ್ಧರಾಗಿ ಆಟವಾಡಬೇಕು ಎಂದರು.

ಪ್ರಾಚಾರ್ಯ ಅಶೋಕ ತುಪ್ಪದ ಮಾತನಾಡಿದರು. ಸಂಜೀವ ಗೌರಗೊಂಡ, ಪಾರಿಸ್ ಅಕ್ಕೋಳ, ಶಿವಾನಂದ ಹಿರೇಮಠ, ದೈಹಿಕ ಶಿಕ್ಷಣ ಶಿಕ್ಷಕ ದತ್ತಾತ್ರೇಯ ಭೋಸಲೆ, ಶಿವಲೀಲಾ ವಸ್ತ್ರದ, ದತ್ತಾದ ಜಾಧವ, ನಯನಾ ನಾಯಕ, ಮುರಿಗೆಪ್ಪ ಹಲ್ಯಾಳ, ಕೃಷ್ಣಾ ಗುರವ, ಜ್ಯೋತಿ ಬಾಗಿ, ರಾಜು ಶಿಂಧೆ, ಪದ್ಮಾಕರ ಕುಲಕರ್ಣಿ ಇತರರಿದ್ದರು. ಅಪ್ಪು ದೊಡವಾಡ ಸ್ವಾಗತಿಸಿದರು. ಪವನ ಮೈಗೂರ ನಿರೂಪಿಸಿದರು. ಮಂಜುನಾಥ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net