

ರಾಯಬಾಗ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯ ಎಂದು ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು.
ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಬಾಜೀರಾವ ಮಗದುಮ್ಮ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಲಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಆಟ ಪ್ರದರ್ಶಿಸಬೇಕು. ನಿರ್ಣಾಯಕರು ತಾರತಮ್ಯ ಮಾಡದೆ ನಿರ್ಣಯ ಕೈಗೊಳ್ಳಬೇಕು ಎಂದರು.
ಉಪಾಧ್ಯಕ್ಷ ಜೆ.ಎಂ. ಮಗದುಮ್ಮ, ಕಾರ್ಯದರ್ಶಿ ಎ.ಟಿ.ಕೂಗೆ, ಸದಸ್ಯರಾದ ಎ.ಡಿ. ಜನಾಜ, ಬಿ.ಜೆ.ಜನಾಜ, ಎ.ಜೆ.ಕಾಮಗೌಡ, ಕೆ.ಜೆ.ಕಾಮಗೌಡ, ಶಿಕ್ಷಕರಾದ ಎ.ಕೆ. ಸಲಗರೆ, ಎಸ್.ಬಿ. ಬೆನಾಡೆ, ಡಿ.ಆರ್.ಭೇಟಡೆ, ಅಕ್ಷತಾ ಸಮಾಜೆ ಇತರರಿದ್ದರು.