

ದೇವದುರ್ಗ: ಶಿಕ್ಷಣ ಹಾಗೂ ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಸಮಾಜದ ಮುಖಂಡರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟ ಪುನರ್ ರಚನೆ ಮತ್ತು ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಗುರುವಾರ ಮಾತನಾಡಿದರು. ಹಿಂದುಳಿದ ವರ್ಗಗಳು ಸಂಘಟನೆ ಕೊರತೆಯಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿವೆ. ಜಿಲ್ಲೆಯಲ್ಲಿ ಸಮಾಜ ಅಭಿವೃದ್ಧಿ ಹೊಂದಲು ಸಂಘಟನೆ ಅನಿವಾರ್ಯವಾಗಿದೆ. ಸದ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಸಮೀಕ್ಷೆ ಆರಂಭವಾಗಲಿದೆ. ಸೆ.14ರಂದು ನುರಿತ ತಜ್ಞರಿಂದ ಹಿಂದುಳಿದ ವರ್ಗಗಳ ಬಗ್ಗೆ ರಾಯಚೂರಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಭಾಗವಹಿಸಬೇಕು ಎಂದರು.
ತಾಲೂಕು ಅಧ್ಯಕ್ಷರಾಗಿ ಶರಣಗೌಡ ಸುಂಕೇಶ್ವರಹಾಳ ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ ಗೌರವಾಧ್ಯಕ್ಷ ಖಾಜನಗೌಡ ಏಗನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಯಾದವ್, ಶ್ರೀಕಾಂತ್ ವಕೀಲ, ವಿಜಯ ಭಾಸ್ಕರ್ ಇಟಗಿ, ಶರಣಪ್ಪ ಕಡಗೋಳು, ಜಂಬಣ್ಣ, ದಾನಪ್ಪ ಯಾದವ್, ಜಂಬಣ್ಣ ನಿಲೋಗಲ್, ರಮೇಶ ಪತ್ತಾರ, ನಾಗರಾಜ ಖಾನಾಪುರ, ಸಾಬಣ್ಣ ಗೂಗಲ್, ಶಂಕರ ಹೂಗಾರ, ಬಸವರಾಜ ಮಡಿವಾಳ, ನಾಗರಾಜ ಪತ್ತಾರ, ರಂಗನಾಥ ಅಬಕಾರಿ, ಅಂಬಾಜಿ, ಗೂಳಪ್ಪ ಹೇಮನೂರು, ಸಿ.ತಾಯಣ್ಣ, ಕಾಸೀಂ ಸಾಬ್, ಪ್ರಭು ಮಸರಕಲ್, ಕರಿಯಪ್ಪ, ಭೋಜರಾಜ ಮಿಣಜಿಗಿ ಇತರರಿದ್ದರು.