ಒಳ್ಳೆಯ ಕಾರ್ಯದಿಂದ ಪುಣ್ಯ ಪ್ರಾಪ್ತಿ

13nagar1
Published on

ನಾಗರಮುನ್ನೋಳಿ: ದೇಶದಲ್ಲಿ ಮಠ-ಮಂದಿರಗಳು ಇರುವುದರಿಂದ ದಾನ-ಧರ್ಮ ಮಾಡುವ ಪದ್ಧತಿ ರೂಢಿಯಲ್ಲಿದೆ ಎಂದು ಕಕಮರಿಯ ಅಭಿನವ ಸ್ವಾಮೀಜಿ ಹೇಳಿದರು.

ಸಮೀಪದ ಬೆಳಕೂಡ ಗ್ರಾಮದ ಈಶ್ವರ ಖಟಾವಿಯವರ ತೋಟದಲ್ಲಿರುವ ಹನುಮ ದೇವಸ್ಥಾನದಲ್ಲಿ ಈಚೆಗೆ ಹನುಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಒಳ್ಳೆಯ ಕಾರ್ಯ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ದಾನದ ಕಾರ್ಯದಲ್ಲಿ ತೊಡಗಿರಿ ಎಂದರು. ಚುಟುಕು ಸಾಹಿತ್ಯ ಪರಿಷತ್ತ ಅಧ್ಯಕ್ಷ ಚಂದ್ರಶೇಖರ ಅರಭಾಂವಿ ಮಾತನಾಡಿದರು.

ಈಶ್ವರ ಖಟಾವಿ, ಚೆಂಪವ್ವ ಖಟಾವಿ, ಬಸವಣ್ಣಿ ಕುಂಬಾರ, ಶಂಕರ ಗಿರಿಜಾಯಿ, ವಿಜಯಕುಮಾರ ಖಟಾವಿ, ಚಂದ್ರಶೇಖರ ಅರಭಾಂವಿ, ನಟರಾಜ ಹಿರೇಮಠ, ಸಂಜು ಖಟಾವಿ, ರಾಜು ಮೋರೆ, ಮಲ್ಲಪ್ಪ ಅರಭಾಂವಿ, ಬಸವಣ್ಣಿ ಕವಣಿ, ದಯಾನಂದ ಹೀರೆಮಠ, ಸಿದ್ದಪ್ಪ ಶಿರಗಾಂವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net