

ಹುಕ್ಕೇರಿ: ಭಾರತೀಯ ಪರಂಪರೆಯಲ್ಲಿ ಜಾತ್ರೆ, ಧಾರ್ಮಿಕ ಸಭೆ ಸಮಾರಂಭಗಳಿಗೆ ಹೆಚ್ಚಿನ ಆದ್ಯತೆ ಇದ್ದು, ಇದರಿಂದ ಒಳ್ಳೆಯ ಆಚಾರ-ವಿಚಾರ ಮತ್ತು ಸಂಸ್ಕೃತಿ ಬೆಳೆಯುತ್ತದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಸರ್ವ ಧರ್ಮೀಯರು ಪಾಲ್ಗೊಂಡು ಸೌಹಾರ್ದಯುತವಾಗಿ ಜಾತ್ರಾ ಮಹೋತ್ಸವ ಆಚರಿಸುವುದು ಶ್ಲಾಘನೀಯ ಎಂದರು.
ಕಾಡಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಸುರೇಶ ವಂಟಮೂರಿ, ಆನಂದ ಲಕ್ಕುಂಡಿ, ಅಶೋಕ ಪಾಟೀಲ, ಸಂಜು ಮಗದುಮ್ಮ, ಶಂಕರಗೌಡ ಪಾಟೀಲ, ದಾನಯ್ಯ ಮಠದ, ಬಸಯ್ಯ ಪೂಜೇರಿ, ವಿನಾಯಕ ವಂಟಮುರಿ, ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ ಇತರರಿದ್ದರು.