ನಿತ್ಯ ಪೂಜೆ, ಪ್ರಾರ್ಥನೆಯಿಂದ ಪ್ರಸನ್ನತೆಯತ್ತ ಬದುಕು

14blh3 ಕರೇಮ್ಮಾದೇವಿ ಜಾತ್ರೆ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 48;
Published on

ಬೈಲಹೊಂಗಲ: ನಿತ್ಯ ಜೀವನದಲ್ಲಿ ಮನಸ್ಸು ಸದಾ ಪ್ರಸನ್ನತೆಯಿಂದಿರಲು ಪೂಜೆ, ಪ್ರಾರ್ಥನೆಗಳಿಂದ ಸಾಧ್ಯ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣ ದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಕರೆಮ್ಮಾದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ದೇವಿಗೆ ಪೂಜೆ ನೆರವೇರಿಸಿ ಮಾತನಾಡಿ, ಜಾತ್ರಾ ಮಹೋತ್ಸವಗಳು ಜನರ ಭಾವನೆ ಬೆಸೆದು ಭಾವೈಕ್ಯತೆ ಮೂಡಿಸುತ್ತವೆ. ಪ್ರತಿಯೊಬ್ಬರು ಅಧ್ಯಾತ್ಮಕ್ಕೆ ಮಹತ್ವ ನೀಡಬೇಕು ಎಂದರು. ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಮಾತನಾಡಿದರು. ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಬಸವರಾಜ ನಾಯ್ಕ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಪುರಸಭೆ ಅಧ್ಯ ವಿಜಯ ಬೋಳಣ್ಣವರ, ಯುವ ಮುಖಂಡ ಬಸವರಾಜ ಕೌಜಲಗಿ, ಸಿಪಿಐ ಪ್ರಮೋದ ಯಲಿಗಾರ, ಸರ್ಕಾರಿ ಅಭಿಯೋಜಕರಾದ ಗುರುನಾಥ ಶಿರೂರ, ಸರೋಜಿನಿ ಬಟಕುರ್ಕಿ, ವಕೀಲ ಸಂದ ಅಧ್ಯ ಎಂ.ಆರ್​.ಮೆಳವಂಕಿ, ಉಪಾಧ್ಯ ಎ.ಎಸ್​.ಶಿದ್ರಾಮನಿ, ಪ್ರಧಾನ ಕಾರ್ಯದರ್ಶಿ ವಿ.ಜಿ.ಕಟದಾಳ, ಸಹ ಕಾರ್ಯದರ್ಶಿ ವಿ.ಸಿ.ಪೂಜೇರ, ಮಾಜಿ ಅಧ್ಯ ಎಸ್​.ಬಿ.ಆನಿಗೋಳ, ಹಿರಿಯ ವಕೀಲ ಆರ್​.ಎ.ಪಾಟೀಲ, ಎಂ.ವೈ.ಸೋಮಣ್ಣವರ, ಜಿ.ಬಿ.ಶೀಗಿಹಳ್ಳಿ, ಎಸ್​.ಜಿ.ಬೂದಯ್ಯನವರ, ಎಸ್​.ಎಂ.ಅಬ್ಬಾಯಿ, ಐ.ಎಸ್​.ಪಾಟೀಲ, ಬಸವರಾಜ ದೋತ್ರದ, ಚಿದಾನಂದ ಸಂಬೋಜಿ, ಎಸ್​.ಜಿ.ಚಿಕ್ಕಮಠ, ಯು.ಕೆ.ಬುಲಾಕೆ ಇತರರಿದ್ದರು. ದಯಾನಂದ ಶಾಸ್ತ್ರಿ ಮುಪ್ಪಯ್ಯನವರಮಠ, ಕಿರಣ ಕಲ್ಮಠ, ಶಶಾಂಕ ಶಿವಸಂಗಯ್ಯನವರಮಠ ಹೋಮ, ಹವನ ನೆರವೇರಿಸಿದರು.

ದೇವಿಗೆ ಮುತೆದೆಯರಿಂದ ಉಡಿ ತುಂಬುವ ಕಾರ್ಯ, ಅನ್ನ ಪ್ರಸಾದ ಹಾಗೂ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net