ಸಮಾವೇಶದಿಂದ ಒಗ್ಗಟ್ಟು ಸಾಧ್ಯ

3sambaragi1
Published on

ಸಂಬರಗಿ: ಪ್ರತಿ ಗ್ರಾಮಗಳಲ್ಲಿ ದಲಿತ ಸಂಘರ್ಷ ಶಾಖೆ ಸ್ಥಾಪಿಸಿ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಶೀಘ್ರ ತಾಲೂಕುಮಟ್ಟದಲ್ಲಿ ಸಮಾವೇಶ ನಡೆಸಲಾಗುವುದು ಎಂದು ಜಿಲ್ಲಾ ದಲಿತ ಸಂಘಷರ್ ಸಮಿತಿ ಅಧ್ಯಕ್ಷ ಸಂಜಯ ತಳವಳಕರ ಹೇಳಿದರು.

ಮಂಗಸೂಳಿ ಗ್ರಾಮದಲ್ಲಿ ಈಚೆಗೆ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿ ಗ್ರಾಮದಲ್ಲಿ ಸಮುದಾಯದ ಕುಂದು-ಕೊರತೆ ಕುರಿತು ಚರ್ಚೆ ನಡೆಸಲಾಗುವುದು. ಸರ್ಕಾರದ ಯೋಜನೆ ಕುರಿತು ಬಡ ಜನರಿಗೆ ಮಾಹಿತಿ ನೀಡಲಾಗುವುದು. ಎಲ್ಲರೂ ವೈಮನಸ್ಸನ್ನು ಬದಿಗಿಟ್ಟು, ಒಂದಾಗಿ ಕೆಲಸ ಮಾಡಲು ಸಿದ್ಧರಾಗಬೇಕು. ಗ್ರಾಮ ಪಂಚಾಯಿತಿಯಲ್ಲಿರುವ ಎಸ್ಸಿ, ಎಸ್ಟಿ ಅನುದಾನ ಬಳಕೆ ಮಾಡಿಕೊಂಡು ಸಮುದಾಯದ ಅಭಿವೃದ್ಧಿ ಮಾಡಬೇಕು ಎಂದರು.

ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರವಿ ಕಾಂಬಳೆ, ಮಹಾಂತೇಶ ಬನಸೋಡೆ, ಪ್ರಕಾಶ ಕಾಂಬಳೆ, ಬಾಲಕೃಷ್ಣ ಭಜಂತ್ರಿ, ಕುಮಾರ ಬನಸೋಡೆ, ಮಚಿಂದ್ರ ಖಾಂಡೆಕರ, ಪಂಡಿತ ಕಾಂಬಳೆ, ಪಾಂಡು ಕಾಂಬಳೆ, ಅಶೋಕ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net