ದಾನ, ಧರ್ಮದಿಂದ ಹೆಸರು ಶಾಶ್ವತ

22 08 2025_BGR_RURAL-PAGE_04
ನೆಲಮಂಗಲ ತಾಲೂಕು ಶಿವಗಂಗೆಯಲ್ಲಿ ರಾಜಗೋಪುರ ಉದ್ಘಾಟನಾ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖೆಯ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಶಿವಗಂಗೆ ಗ್ರಾಪಂ ಅಧ್ಯ ಚೇತನ ನಾಗೇಶ್​, ಗ್ರಾಪಂ ಮಾಜಿ ಅಧ್ಯ ಎಚ್​.ಸಿ.ಹೊನ್ನಗಂಗಾ ಶೆಟ್ಟಿ ಇತರರು ಇದ್ದರು.
Published on

ದಾಬಸ್​ಪೇಟೆ : ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ದಣ ಕಾಶಿ ಶಿವಗಂಗೆ ೇತ್ರದಲ್ಲಿ ಗುರುವಾರ ರಾಜಗೋಪುರವನ್ನು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖೆಯ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.

ಶಿವಗಂಗೆಯಲ್ಲಿ ನಾಡಪ್ರಭು ಕೆಂಪೇಗೌಡ ಕಟ್ಟಿಸಿದ್ದ ರಾಜಗೋಪುರ ಶಿಥಿಲವಾಗಿದ್ದು, ಅದನ್ನು ತೆರವುಗೊಳಿಸಿ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ಭಕ್ತರಾದ ನಾಗರತ್ನ ಗಂಗಪ್ಪ ಮಾವನಹಳ್ಳಿ ಕುಟುಂಬಸ್ಥರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಜಗೋಪುರ ಕಟ್ಟಿಸಿದ್ದಾರೆ. ಪ್ರಸ್ತುತ ಸಮಾಜದಲ್ಲಿ ದಾನ, ಧರ್ಮ ಮಾಡುವ ಜನರು ಕಡಿಮೆ ಇದ್ದಾರೆ. ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಆದರೆ ಇಂಥ ಪುಣ್ಯ ೇತ್ರದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಬೇಕು. ದುಡಿದ ಹಣದಿಂದ ತಾನು, ತನ್ನ ಮನೆ ಎಂದು ಇರದೆ ಗುಡಿ ಗೋಪುರ, ಕೆರೆ&ಕಟ್ಟೆಗಳು ಸೇರಿ ಇನ್ನಿತರ ಪುಣ್ಯ ಕೆಲಸ ಮಾಡಬೇಕು. ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ನೀನು ಇಲ್ಲದಿದ್ದರೂ ನಿನ್ನ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡರು 500 ವರ್ಷಗಳ ಹಿಂದೆ ಕಟ್ಟಿಸಿರುವ ಗುಡಿ ಗೋಪುರಗಳನ್ನು ಇಂದಿಗೂ ಕಾಣಬಹುದಾಗಿದೆ. ಮನುಷ್ಯ ಸತ್ತ ಮೇಲೂ ಅವನ ಹೆಸರು ಜೀವಂತವಾಗಿರಬೇಕು ಎಂದರೆ ಪುಣ್ಯ ಕಾರ್ಯಗಳನ್ನು ಮಾಡಬೇಕು ಎಂದರು. ಗಂಗಾಧರೇಶ್ವರ ಹೊನ್ನಾದೇವಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯ ಶಿವಗಂಗೆ ಸಿದ್ದರಾಜು, ಮಾಜಿ ಅಧ್ಯ ಪಂಚಾರಯ್ಯ, ವಿ.ಎಚ್​.ಗಂಗಾ ರುದ್ರಯ್ಯ, ಸದಸ್ಯರಾದ ಉಷಾ, ಶಿವಗಂಗಯ್ಯ, ಗಂಗಾಧರ್​, ಹೊನ್ನೇನಹಳ್ಳಿ ಲೋಕೇಶ್​ ಕೆಂಚಪ್ಪ, ಕೆಂಪರಾಮಣ್ಣ, ಪ್ರಕಾಶ್​, ಶ್ರೀನಿವಾಸ್​, ಬೈರೇಗೌಡ, ಗೋಪಾಲ್​ ಹಲವು ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net