

ರಾಮದುರ್ಗ: ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ನಿಯಮಿತ ರಕ್ತದಾನದಿಂದ ದೇಹದಲ್ಲಿ ಹೊಸ ಚೆತನ್ಯ ಸೃಷ್ಟಿಯಾಗುತ್ತದೆ. ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುತ್ತಿರುವುದು ಶ್ಲಾನೀಯ
ಎಂದು ತಾಲೂಕು ಆಸ್ಪತ್ರೆಯ ವೆದ್ಯಾಧಿಕಾರಿ ಡಾ. ನವೀನ ನಿಜಗುಲಿ ಹೇಳಿದರು.
ಪಟ್ಟಣದ ಸಿಎಸ್ ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾವಿದ್ಯಾಲಯದ ಯುತ್ ರೆಡ್ ಕ್ರಾಸ್, ತಾಲೂಕು ಸಾರ್ವಜನಿಕ ಆಸ್ಪತ್ರೆ, ವೆದ್ಯಕಿಯ ವಿದ್ಯಾ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ, ಎನ್ಎಸ್ಎಸ್, ಎನ್ಸಿಸಿ, ರೋವರ್ ಮತ್ತು ರೇಂಜರ್ ಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು,
ಪ್ರೊ.ಎಸ್.ಎಸ್.ಸುಲ್ತಾನಪುರ ಮಾತನಾಡಿ, ರಕ್ತದಾನ ಮತ್ತೊಂದು ಜೀವ ಉಳಿಸುವ ಪವಿತ್ರ ಕಾರ್ಯ ಎಂದರು. 55 ಜನ ರಕ್ತದಾನ ಮಾಡಿದರು.
ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಪ್ರಸಾರಕ ಸಮಿತಿಯ ಹಿರಿಯ ಸದಸ್ಯ ಡಾ. ವೈ.ಬಿ.ಕುಲಗೋಡ, ರೋಟರಿ ಇನ್ವೀಲ್ ಅಧ್ಯೆ ಡಾ. ನಿರ್ಮಲಾ ಹಂಜಿ, ಜೆಸಿಐ ಸಂಸ್ಥೆಯ ಅಧ್ಯ ಶಂಕರ ಜಿರಂಕಳಿ, ದೆಹಿಕ ಶಿಕ್ಷಣ ನಿರ್ದೇಶಕ ಬಿ.ಬಿ. ಕಬಾಡಗಿ, ಉಪನ್ಯಾಸಕಿ ಮಂಜುಳಾ ಮೂಡ್ಲವರ, ಜಿ.ಡಿ.ರಾಠೋಡ, ಎಸ್.ಐ. ಮಗಳಲಿ ಇತರರಿದ್ದರು.