ಅಂತರ್​ ಶಾಲಾ ತ್ರೋಬಾಲ್​ ಪಂದ್ಯ ಉದ್ಘಾಟನೆ

udp-25-shirva
Published on

ಉಡುಪಿ: ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ರಾಜ್ಯದ ತ್ರೋಬಾಲ್​ ತಂಡದ ನಾಯಕಿ ಹಾಗೂ ರಾಷ್ಟ್ರಮಟ್ಟದ ಆಟಗಾರ್ತಿ ಪ್ರತಿಕ್ಷಾ ಕುಲಾಲ್​ ಹೇಳಿದರು.

ಶುಕ್ರವಾರ ಶಿರ್ವದ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಡುಪಿ ವಲಯದ ಐಕ್ಸ್​ ಅಂತರ್​ ಶಾಲಾ ಬಾಲಕರ ಮತ್ತು ಬಾಲಕಿಯರ ತ್ರೋಬಾಲ್​ ಪಂದ್ಯಾವಳಿ ಉದ್ಘಾಟಿಸಿ,ಅವರು ಮಾತನಾಡಿದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ. ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ ಭಾಸ್ಕರ ಶೆಟ್ಟಿ ಮತ್ತು ಶಾಲಾ ಸಂಚಾಲಕ ಮಟ್ಟಾರ್​ ರತ್ನಾಕರ್​ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಪ್ರಾಂಶುಪಾಲೆ ಡಾ. ಸಹನಾ ಹೆಗ್ಡೆ ಮತ್ತು ಉಪಪ್ರಾಂಶುಪಾಲೆ ನೀಶಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಕ್ಷಾ ಸ್ವಾಗತಿಸಿ, ಛಾಯ ರಾವ್​ ವಂದಿಸಿ, ಸಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ವಲಯದ 21 ಸಂಸ್ಥೆಗಳಿಂದ ವಯೋಮಿತಿ 14ರ ಬಾಲಕ ಮತ್ತು ಬಾಲಕಿಯರ 29 ತಂಡಗಳು ಹಾಗೂ ವಯೋಮಿತಿ 17ರ ಬಾಲಕ ಮತ್ತು ಬಾಲಕಿಯರ 34 ತಂಡಗಳು ಸೇರಿ ಒಟ್ಟಿಗೆ 63 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net