

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕೊರಡುಕೊಲ್ಲಿನ ಹೆಲಿಪ್ಯಾಡ್‍ನಲ್ಲಿ ಶನಿವಾರ ಶೃಂಗೇರಿ ಅಡ್ವೆಂಚರ್ ಮತ್ತು ಮೋಟಾರ್ ಸ್ಪೋಟ್ಸ್ ಕ್ಲಬ್ ನಿಂದ ಮಲೆನಾಡು ತ್ರಿಲ್ಸ್ ಮೋಟಾರ್ ರ್ಯಾಲಿಯನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಮಲೆನಾಡಿನಲ್ಲಿ ಜೀಪ್ ರ್ಯಾಲಿಗಳು ನಡೆಯುವುದು ವಿರಳ. ಈ ರೀತಿ ರ್ಯಾಲಿಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದವು. ವಿದೇಶಗಳಲ್ಲಿ ಜನಪ್ರಿಯವಾಗಿರುವ ರ್ಯಾಲಿಗಳು ಸ್ಥಳೀಯ ಯುವಕರ ಉತ್ಸಾಹದಿಂದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಇದು ಸ್ಪರ್ಧೆಯಲ್ಲ. ಕೇವಲ ಮನೋರಂಜನೆಗಾಗಿ ನಡೆಸುವ ರ್ಯಾಲಿ. ಕರೊನಾದ ಕಾನೂನು ಪರಿಪಾಲನೆಯೊಂದಿಗೆ ಇಂತಹ ಸಾಹಸ ಕ್ರೀಡೆ ನಡೆಸಲು ಸರ್ವರ ಸಹಕಾರ ಮುಖ್ಯ. ಪರಿಸರ ಕಾಳಜಿ ಯುವಕರಲ್ಲಿ ಮೂಡಬೇಕು. ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಲು ಸಾಧ್ಯ ಎಂದರು.
ಭಾರತ ಮತ್ತು ನೇಪಾಳ ಶಟಲ್ ಬಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ ಸ್ಕಂದ ಗೌಡ ಅವರನ್ನು ಗೌರವಿಸಲಾಯಿತು. ರ್ಯಾಲಿಯಲ್ಲಿ 42 ಜೀಪ್‍ಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಬಿ.ಶಿವಶಂಕರ್, ಶಿಲ್ಪಾರವಿ, ತಾ.ಪಂ. ಸದಸ್ಯ ಕಚ್ಚೋಡಿ ರಮೇಶ್, ಶೃಂಗೇರಿ ಅಡ್ವೆಂಚೆರ್ ಮತ್ತು ಮೋಟಾರ್ ಸ್ಪೋಟ್ರ್ಸ್ ಕ್ಲಬ್‍ನ ಶ್ರೀವತ್ಸ, ಸದಸ್ಯರಾದ ಭರತ್ ಗಿಣಿಕಲ್, ಡಿ.ಮಹೇಶ್, ಚೇತನ್ ಹೆಗ್ಡೆ, ವಿಶ್ವಾಸ್ ಇದ್ದರು.