

ಧಾರವಾಡ: ನಗರದ ಎಲ್‌ಐಸಿ ಬಳಿ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಮೂವರಿಗೆ ಚಾಕು ಇರಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಆಟೋದಲ್ಲಿ ಬಂದ 6 ಜನರು ಯುವತಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಯುವಕರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಕಿರಣ, ಆಸೀ-ï ಹಾಗೂ ಶಾನವಾಜ್ ಎಂಬುವರು ಗಾಯಗೊಂಡಿದ್ದಾರೆ. ಓರ್ವನ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ಚಾಕು ಹೊಟ್ಟೆಯಲ್ಲೇ ಉಳಿದಿದೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳು ಯುವಕನನ್ನು ಚಾಕು ಚುಚ್ಚಿದ ಸ್ಥಿತಿಯಲ್ಲೇ ಹುಬ್ಬಳ್ಳಿಯ ಕಿಮ್ಸ್ಗೆ ರವಾನಿಸಿದ್ದಾರೆ.