ವೇಶ್ಯಾವಾಟಿಕೆ ಜಾಲ ಮೂವರು ಯುವತಿಯರ ರಕ್ಷಣೆ

Published on

ಮೈಸೂರು: ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ಒಡನಾಡಿ ಸೇವಾ ಸಂಸ್ಥೆಯ ನೆರವಿನೊಂದಿಗೆ ದಾಳಿ ನಡೆಸಿದ ಜಯಪುರ ಠಾಣೆ ಪೊಲೀಸರು, ಎಂಟು ಮಂದಿಯನ್ನು ಬಂಧಿಸಿ ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಮೈಸೂರು ತಾಲೂಕಿನ ದಾಸನಕೊಪ್ಪಲಿನಲ್ಲಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಿಂಗ್‌ಪಿನ್ ಮಂಜು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ತಮಗೆ ದೊರೆತ ಮಾಹಿತಿ ಮೇರೆಗೆ ಒಡನಾಡಿ ಸೇವಾ ಸಂಸ್ಥೆಯ ಸದಸ್ಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಪೊಲೀಸ ಮನೆಯ ಮೇಲೆ ದಾಳಿ ನಡೆಸಿದ ವೇಳೆ 10ಕ್ಕೂ ಹೆಚ್ಚು ಯುವಕರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಲೇವುಡ್ ಶೀಟ್ ಮಾರಾಟದ ಬೋರ್ಡ್: ವೇಶ್ಯಾವಾಟಿಕೆ ನಡೆಯುತ್ತಿದ್ದರಿಂದ ಹೆಚ್ಚು ಜನ ಬಂದು ಹೋಗುತ್ತಿದ್ದರು. ಹೀಗಾಗಿ ಗ್ರಾಮದ ಜನತೆಗೆ ಅನುಮಾನ ಬಾರದಿರಲಿ ಎಂದು ಮನೆಯ ಮುಂದೆ ಫ್ಲೇವುಡ್ ಶೀಟ್‌ಗಳು ಮಾರಾಟಕ್ಕಿವೆ ಎಂದು ಬೋರ್ಡ್ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪ್ರಕರಣದ ಕಿಂಗ್‌ಪಿನ್ ಮಂಜು, ಹುಡುಗಿಯರ ಪೋಟೋವನ್ನು ಮೊಬೈಲ್ ಸ್ಟೇಟಸ್‌ನಲ್ಲಿ ಹಾಕಿ ದರವನ್ನು ಫಿಕ್ಸ್ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net