ಮೂರು ವರ್ಷದ ಚಿಂತನೆ

HSD VACHANA 17 (2)
Published on

ಹೊಸದುರ್ಗ: ‘ತುಮಾರೆ ಸಿವಾ ಔರ್ ಕೋಯಿ ನಹೀ’ ವಚನ ಅಭಿಯಾನ ಯೋಜನೆ ಮೂರು ವರ್ಷದ ಚಿಂತನೆ. ಕರೊನಾ ಕಾರಣಕ್ಕೆ ತಡವಾಯಿತು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮಹಾರಾಷ್ಟ್ರದ ನವಿ ಮುಂಬಯಿಯ ಮರಾಠಿ ಸಾಹಿತ್ಯ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ತುಮಾರೆ ಸಿವಾ ಔರ್ ಕೋಯಿ ನಹೀ ವಚನ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂತಿಮವಾಗಿ ಶ್ರೀನಿವಾಸ್ ಕಪ್ಪಣ್ಣ ಅವರು ಸುರೇಶ್‌ರಾವ್ ಮತ್ತು ಕುಲವಂತ್ ಸಿಂಗ್ ಮೂಲಕ ಬಸವಣ್ಣನ 44 ವಚನಗಳನ್ನು ಕನ್ನಡದಿಂದ ಹಿಂದಿಗೆ ಅನುವಾದಿಸಿದರು. ಸ್ನೇಹಾ ಕಪ್ಪಣ್ಣ ಅವರು ನೃತ್ಯ ಸಂಯೋಜನೆ ಮಾಡಿದರು ಎಂದರು.

24 ಜನ ಕಲಾವಿದೆಯರು ವಚನಗಳಿಗೆ ಹೊಸ ಅರ್ಥವನ್ನು ನೃತ್ಯದ ಮೂಲಕ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವಾಗಿ ವಚನ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿದೆ. ಇಲ್ಲಿಯವರಗೆ ವಿವಿಧ ರಾಜ್ಯಗಳಲ್ಲಿ 35 ಪ್ರದರ್ಶನಗಳನ್ನು ನೀಡಲಾಗಿದೆ. ನೃತ್ಯವನ್ನು ಕಣ್ತುಂಬಿಕೊಂಡವರು ಬಸವತತ್ವಕ್ಕೆ ಮಾರು ಹೋಗಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net