ಮೂವರಿಗೆ ಗಂಭೀರ ಗಾಯ

Accident
Published on

ಅಣ್ಣಿಗೇರಿ: ಸರಕು ಸಾಗಣೆ ವಾಹನ ಮತ್ತು ಕಾರು ಡಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡ ಘಟನೆ ಸಮೀಪದ ಸವಳ ಹಳ್ಳದ ಬಳಿ ಮಂಗಳವಾರ ಸಂಭವಿಸಿದೆ.

ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ನವಲಗುಂದ ತಾಲೂಕಿನ ಬೆಳಹಾರ ಗ್ರಾಮದ ಅನಿಲ್ ಚಲವಾದಿ ಹಾಗೂ ವಿಜಯ ಚಲವಾದಿ, ಗೂಡ್ಸ್ ಚಾಲಕ ಅಮರಗೋಳ ಗ್ರಾಮದ ದರ್ವೇಜ್ ಕಲಕೇರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಪಿಎಸ್‌ಐ ಸಿದ್ದಾರೂಢ ಆಲದಕಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net