ಮೂರು ಟನ್ ಗೋವಿನ ಮೂಳೆ ಪತ್ತೆ

3bdvt2
Published on

ಭದ್ರಾವತಿ: ಹಳೇನಗರ ಪೊಲೀಸರು ಶನಿವಾರ ರಾಶಿ ರಾಶಿ ಗೋವಿನ ಮೂಳೆಗಳನ್ನು ಪತ್ತೆಮಾಡಿದ್ದಾರೆ. ಹಿಂದು ಸಂಘಟನೆ ಕಾರ್ಯಕರ್ತ ಅರಳಿಹಳ್ಳಿ ದೇವರಾಜ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಹೊಳೆಹೊನ್ನೂರು ರಸ್ತೆ ಎಡಭಾಗದ ಎಚ್.ಎಂ.ಟಿಂಬರ್ ಆ್ಯಂಡ್ ಫರ್ನಿಚರ್ ಅಂಗಡಿ ಹಿಂಭಾಗದ ಭದ್ರಾನದಿಯ ತಟದಲ್ಲಿರುವ ತೋಟದಲ್ಲಿ ಅನಧಿಕೃತ ಕಟ್ಟಡದ ಒಳಗೆ ಹಾಗೂ ಹೊರಗೆ ಇದ್ದ ರಾಶಿ, ರಾಶಿ ಗೋವಿನ ಮೂಳೆಗಳು ಹಾಗೂ ಮಾಂಸದ ತುಣುಕುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಕಟ್ಟಡದ ಮಾಲೀಕ ಮೋಮಿನ್ ಎಂಬಾತನನ್ನು ಬಂಧಿಸಿ 3 ಟನ್ ತೂಕದ ಗೋವಿನ ಮೂಳೆಯ ಭಾಗಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net