ಮೂರುಸಾವಿರ ಮಠದ ಜಾತ್ರೆ ಅದ್ದೂರಿ

26blh4
Published on

ಬೆಲಹೊಂಗಲ: ಪಟ್ಟಣದ ಶಾಖಾ ಮೂರುಸಾವಿರಮಠದ ಶ್ರೀ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಸಾವಿರಾರು ಭಕ್ತರ ಹಷೋರ್ದ್ಘಾರ ನಡುವೆ ಬುಧವಾರ ವಿಜಂಭಣೆಯಿಂದ ನೆರವೇರಿತು.

ಜವಳಿ ಕೂಟದಲ್ಲಿರುವ ರಥಕ್ಕೆ ಕಬ್ಬು, ಬಾಳೆದಿಂಡು, ತಳಿರು ತೋರಣ, ತ್ರಿವರ್ಣ ಧ್ವಜ ಸಂಕೇತದ ಪರಪರಿ ಕಟ್ಟಿ ಶಂಗರಿಸಲಾಗಿತ್ತು. ಮಠದ ಆವರಣದಿಂದ ಜವಳಿಕೂಟವರೆಗೆ ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.

ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ, ರುದ್ರಾಮಠದ ಬಸವಲಿಂಗ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಗುರು ಮಡಿವಾಳೇಶ್ವರಮಠದ ಮಡಿವಾಳೇಶ್ವರ ಸ್ವಾಮೀಜಿ, ಭಗಳಾಂಬಾದೇವಿ ದೇವಸ್ಥಾನದ ವೀರಯ್ಯ ಹಿರೇಮಠ, ವೇ.ಮೂ. ವಿಶ್ವನಾಥ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಭಕ್ತರು ಹರ ಹರ ಮಹಾದೇವ, ನೀಲಕಂಠ ಮಹಾಶಿವಯೋಗಿ, ಹಾನಗಲ್​ ಗುರು ಕುಮಾರ ಸ್ವಾಮೀಜಿ, ಗಂಗಾಧರ ಸ್ವಾಮೀಜಿ ಅವರಿಗೆ ಜೆ ಎಂದು ೂಷಣೆ ಕೂಗಿದರು. ವಿವಿಧ ವಾದ್ಯ ಮೇಳಗಳು ರಥೋತ್ಸವದ ಮೆರಗು ಹೆಚ್ಚಿಸಿದವು. ರಥೋತ್ಸವ ಜವಳಿ ಕೂಟದಿಂದ ಉಪ್ಪಿನ ಕೂಟ ವರೆಗೆ ಸಾಗಿ ಮರಳಿ ಜವಳಿ ಕೂಟಗೆ ಬಂದು ತಲುಪಿತು.

ನೀಲಕಂಠೇಶ್ವರ ವಿದ್ಯಾವರ್ಧಕ ಶಿಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು, ಭಕ್ತರು ಪಾಲ್ಗೊಂಡಿದ್ದರು.

ಪಲ್ಲಕ್ಕಿ ಉತ್ಸವ: ಪ್ರಾಥ ಕಾಲದಲ್ಲಿ ಅವಿರಳ ಪರಮಜ್ಯೋತಿ ನೀಲಕಂಠ ಮಹಾಶಿವಯೋಗೀಶ್ವರರ ಹಾಗೂ ಲಿಂ. ಗಂಗಾಧರ ಮಹಾಸ್ವಾಮೀಜಿ ಅವರ ಕರ್ತ ಗದ್ದುಗೆಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾಚರಣೆ, ಪಲ್ಲಕ್ಕಿ ಉತ್ಸವ ಜರುಗಿತು. ಸಂಜೆ ಸೇವಾರ್ಥಿಗಳಿಗೆ ಸನ್ಮಾನ ಸಮಾರಂಭ, ಪ್ರಭುನೀಲಕಂಠ ಸ್ವಾಮೀಜಿ ಅವರ ತುಲಾಭಾರ ಸೇವೆ ಭಕ್ತರಿಂದ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net