ಮೂವರು ಕಳ್ಳರ ಬಂಧನ

23manju8-Web
ಬಂಧಿತರೊಂದಿಗೆ ಬೆಳಗಾವಿ ರೈಲ್ವೆ ಠಾಣೆ ಪೊಲೀಸರು.
Published on

ಬೆಳಗಾವಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಮತ್ತುಬರಿಸುವ ಚಾಕಲೇಟ್ ನೀಡಿ ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬೆಳಗಾವಿ ರೈಲ್ವೆ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಿಹಾರ ಮೂಲದ ಮಹಮ್ಮದ್‌ಮುಕ್ತಾರ್ ಮಹಮ್ಮದ್ ಅನ್ವರುಲ್ (21), ಸಾದಾಬ್ ಅಬ್ದುಲ್ ಖಯ್ಯೂಂ ಲಲಿಯಾ (35) ಹಾಗೂ ಅನ್ವರ್ ಆಲಂ ಕಲಿಂವುದ್ದೀನ್ (25) ಬಂಧಿತರು. ಮಾ.19ರಂದು ವಾಸ್ಕೋ-ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿದ್ದ ಸಕೆಂದರ ರಾಜೇಂದ್ರ ಚೌಧರಿ, ಸೋನು ಅಸರಪಿ ಚೌಧರಿ ಹಾಗೂ ಸುರೇಂದ್ರಕುಮಾರ ಎಂಬುವರ ಸ್ನೇಹ ಬೆಳೆಸಿದ ಆರೋಪಿಗಳು ಮೊದಲಿಗೆ ಸಮೋಸಾ ಹಾಗೂ ಬೇಲ್ ತಿನ್ನಲು ಕೊಟ್ಟು ಬಳಿಕ ಚಾಕಲೇಟ್ ನೀಡಿ ಅವರ ಪ್ರಜ್ಞೆ ತಪ್ಪಿಸಿ ಮೊಬೈಲ್, ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಬಳಿಕ ಸಕೆಂದರ, ಸೋನು ಹಾಗೂ ಸುರೇಂದ್ರಕುಮಾರ ಪ್ರಜ್ಞೆ ಬಂದ ಬಳಿಕ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೆಲೆಬಾಳುವ ವಸ್ತುಗಳು, ಮತ್ತುಬರಲು ಉಪಯೋಗಿಸುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಿಎಸ್‌ಐ ಟಿ.ರಮೇಶ, ಆರ್‌ಪಿಎಫ್ ಪಿ.ಐ. ದಿನೇಶಕುಮಾರ, ಎಎಸ್‌ಐ ರಮೇಶ, ಸಿಬ್ಬಂದಿ ಬಿ.ಬಿ. ಬಂಡಿವಡ್ಡರ, ಮಂಜು ನಾಥರಾವ್, ಸಂಗಪ್ಪ ಕೋಟ್ಯಾಳ, ಶಂಕರಾನಂದ ಪೂಜೇರಿ, ಮಂಜುನಾಥ ರಾಯಕೊಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net