ನೂಕು ನುಗ್ಗಲಿನಲ್ಲಿ ಹಣ, ಒಡವೆ ಕದಿಯುತ್ತಿದ್ದ ಮೂವರು ಕಳ್ಳಿಯರ ಬಂಧನ

IMG_20250731_150808.jpg
Published on

ಚಿಕ್ಕಬಳ್ಳಾಪುರ: ಇಲ್ಲಿನ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಹಣ, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಗುಲ್ಬರ್ಗಾದ ಭಾರತ್‌ ನಗರ ತಾಂಡದ ತುಳಸಿ (೨೨), ಪ್ರೇಮಾ (೨೧) ಹಾಗೂ ಸೋನಿಯಾ (೨೫) ಆರೋಪಿಗಳು. ಮೂವರು ಚಿಂದಿ ಅಯುವ ಕೆಲಸ ಮಾಡುತ್ತಿದ್ದರ ನಡುವೆ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದಾರೆ. ಬಂಧಿತರಿಂದ ೭೦ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

*ನಿಲ್ದಾಣದಲ್ಲಿ ಕಳ್ಳತನ
ಕಳೆದ ಮೇ.೨೭ ರಂದು ನಗರದ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದಲ್ಲಿ ಗುಡಿಬಂಡೆಗೆ ಹೋಗಲು ನೂಕು ನುಗ್ಗಲಿನಲ್ಲಿ ರಿಹಾನ ಖಾನಂ ಎಂಬುವವರು ಬಸ್ಸನ್ನು ಹತ್ತುತ್ತಿರುವಾಗ ಬ್ಯಾಗಿನಲ್ಲಿದ್ದ ಒಡವೆಗಳ ಕಳ್ಳತನವಾಗಿತ್ತು. ಇದರ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದನ್ನು ಭೇದಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ವಿಶೇಷ ತಂಡವನ್ನು ರಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net