ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಮೂವರು ವಿದ್ಯಾರ್ಥಿಗಳು

26-6-25--krs4
ಕೆ.ಆರ್.ಸಾಗರ ಅಣೆಕಟ್ಟೆಯಿಂದ 45 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟಿರುವ ಬೆಳಗೊಳ ಬಳಿ ಇರುವ ಬಲಮುರಿಗೆ ಪ್ರವಾಸಿಗರು ಬಾರದಂತೆ ಬಂದ್ ಮಾಡಿರುವುದು.
Published on

ಮೈಸೂರು: ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಲೂಕಿನ ಮೀನಾಕ್ಷಿಪುರದ ಕೆಆರ್‌ಎಸ್ (ಕಾವೇರಿ ನದಿ) ಹಿನ್ನೀರಿನಲ್ಲಿ ಭಾನುವಾರ ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಮಂಡ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಸಂತೆಮರಳ್ಳಿಯ ಸಿದ್ದೇಶ್(22), ಪಿರಿಯಾಪಟ್ಟಣದ ಪ್ರಶಾಂತ್(21) ಹಾವೇರಿಯ ಕೃಷ್ಣ (21) ಮೃತ ವಿದ್ಯಾರ್ಥಿಗಳು. ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಸಿದ್ದೇಶ್, ಪ್ರಶಾಂತ್, ಕೃಷ್ಣ ಸೇರಿದಂತೆ 6 ವಿದ್ಯಾರ್ಥಿಗಳು ಬೆಳಗ್ಗೆ ಮೀನಾಕ್ಷಿಪುರಕ್ಕೆ ತೆರಳಿದ್ದರು.

ಸಿದ್ದೇಶ್, ಪ್ರಶಾಂತ್ ಮತ್ತು ಕೃಷ್ಣ ಈಜಲು ಬೆಳಗ್ಗೆ 11ಕ್ಕೆ ನೀರಿಗೆ ಇಳಿದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಇಲವಾಲ ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಿ ಮಧ್ಯಾಹ್ನ 3 ಕ್ಕೆ ಶವಗಳನ್ನು ಹೊರ ತೆಗೆದರು. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net