ಮೊತ್ತಹಳ್ಳಿ ಗ್ರಾಮದಲ್ಲಿ ನಾಯಿ ದಾಳಿ: ಮೂರು ಕುರಿಗಳು ಸಾವು

Sheep Death Mandya
Published on

ಮಂಡ್ಯ: ತಾಲೂಕಿನ ಕೊತ್ತತ್ತಿ ಹೋಬಳಿ ಮೊತ್ತಹಳ್ಳಿ ಗ್ರಾಮದಲ್ಲಿ ಶನಿವಾರ ನಾಯಿಗಳು ದಾಳಿ ನಡೆಸಿ ಮೂರು ಕುರಿಯನ್ನು ಕೊಂದು ಹಾಕಿವೆ.

ಗ್ರಾಮದ ಶಿವಲಿಂಗಯ್ಯ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಇವರ 17 ಕುರಿಗಳನ್ನು ಸಾಕುತ್ತಾ ಜೀವ ನಡೆಸುತ್ತಿದ್ದರು. ಆದರೆ ನಾಯಿಗಳು ಎಂಟು ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿವೆ. ಈ ಪೈಕಿ ಮೂವರು ಮೃತಪಟ್ಟಿದ್ದು, ಎರಡು ಕುರಿಗಳು ಗಾಯಗೊಂಡಿವೆ. ಘಟನೆಯಿಂದ ನಷ್ಟವಾಗಿದ್ದು, ಪರಿಹಾರ ಕೊಡುವಂತೆ ಶಿವಲಿಂಗಯ್ಯ ಮನವಿ ಮಾಡಿದ್ದಾರೆ. ಜತೆಗೆ ನಾಯಿ ಹಾವಳಿ ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net