ಮೂವರು ಸಾಹಿತಿಗಳಿಗೆ 'ಮಲಬಾರ್​ ವಿಶ್ವಸಾಹಿತ್ಯ' ಪ್ರಶಸ್ತಿ

Award
Published on

ನ. 22ರಂದು ಉಡುಪಿಯಲ್ಲಿ ಪುರಸ್ಕಾರ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ ವತಿಯಿಂದ ಪ್ರದಾನ ಮಾಡಲಾಗುವ ಸಾಹಿತಿ ಮೇಟಿ ಮುದಿಯಪ್ಪ ಸ್ಮರಣಾರ್ಥ ಮಲಬಾರ್​ ವಿಶ್ವಸಾಹಿತ್ಯ ಪುರಸ್ಕಾರ-2025ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.

ಸಮಗ್ರ ಸಾಹಿತ್ಯ ವಿಭಾಗಕ್ಕೆ ಸಂಬಂಧಿಸಿ ಧಾರವಾಡದ ಚನ್ನಪ್ಪ ಅಂಗಡಿ, ಸಂಶೋಧನೆ ಹಾಗೂ ವಿಮರ್ಶೆ ವಿಭಾಗಕ್ಕೆ ಉಡುಪಿಯ ಡಾ. ನಿಕೇತನಾ ಹಾಗೂ ಕಾವ್ಯ ವಿಭಾಗಕ್ಕೆ ಬೆಂಗಳೂರಿನ ಮುದಲ್​ ವಿಜಯ್​ ಆಯ್ಕೆಯಾಗಿದ್ದಾರೆ.

ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ನ ಉಡುಪಿ ಶಾಖೆಯಲ್ಲಿ ನ. 22ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ, ಬೆಳ್ಳಿ ಪದಕ ಹಾಗೂ 5 ಸಾವಿರ ರೂ. ನಗದು ಒಳಗೊಂಡಿದೆ ಎಂದು ಸಮಿತಿಯ ಸಂಚಾಲಕಿ ಸಂಧ್ಯಾ ಶೆಣೈ ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net