ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದ ಪೋಸ್ಟ್ ಮತ್ತು ಟೆಲಿಕಾಮ್ ವಸತಿಗೃಹದಲ್ಲಿ ಮೂರು ಎಚ್‌ಪಿ ಮೋನೋ ಬ್ಲಾಕ್ ಪಂಪ್ ಕಳವಾದ ಘಟನೆ ಇತ್ತೀಚೆಗೆ ನಡೆದಿದೆ.
ಈ ಕುರಿತು ಡಿ.ಎಂ. ಶರಣಪ್ಪ ಅವರು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ 10 ಸಾವಿರ ರೂ. ಮೌಲ್ಯದ ಮೂರು ಪಂಪ್ ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.