ಸಮವಸ್ತ್ರದಲ್ಲೇ ಮದ್ಯ ಸೇವಿಸಿದ ಆರೋಪ ; ಮೂವರು ಪೊಲೀಸರು ಅಮಾನತು

23 kunigal 1
Published on

ಕುಣಿಗಲ್ : ಸಮವಸ್ತ್ರದಲ್ಲೇ ಪೊಲೀಸ್ ವಾಹನದಲ್ಲಿ ಕುಳಿತು ಮಂಗಳವಾರ ರಾತ್ರಿ ಮದ್ಯ ಸೇವಿಸಿದ್ದ ಆರೋಪದಲ್ಲಿ ಮೂವರು ಪೊಲೀಸರನ್ನು ಎಸ್ಪಿ ಡಾ.ಕೆ.ವಂಶಿಕೃಷ್ಣ ಬುಧವಾರ ಅಮಾನತು ಮಾಡಿದ್ದಾರೆ.

ಚಿಕ್ಕನಾಯಕನಹಳ್ಳಿ ಎಎಸ್‌ಐ ಶ್ರೀನಿವಾಸ್, ದಂಡಿನಶಿವರ ಠಾಣೆ ಪೇದೆ ಪರಮೇಶ್ ಹಾಗೂ ಡಿಆರ್ ಪೇದೆ ಸಂತೋಷ್ ಅಮಾನತುಗೊಂಡವರು. ಪಟ್ಟಣದ ಮಹಾತ್ಮಗಾಂಧಿ ಕಾಲೇಜು ಮುಂಭಾಗ ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರನ್ನು ರಾತ್ರಿಯೇ ಬಂಧಿಸಿ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಕುಣಿಗಲ್ ಠಾಣೆ ಎದುರು ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು.

ಗ್ರಾಪಂ ಚುನಾವಣೆ ಕರ್ತವ್ಯ ಮುಗಿಸಿದ ನಂತರ ಮದ್ಯ ಸೇವನೆ ಮಾಡುತ್ತಿದ್ದುದನ್ನು ಕೆಆರ್‌ಎಸ್ ಪಕ್ಷದ ಯುವ ಟಕದ ಅಧ್ಯಕ್ಷ ರು ಜಾಣಗೆರೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ವಿಡಿಯೋದಲ್ಲಿ ಪೊಲೀಸರು ಮದ್ಯಪಾನ ಮಾಡುತ್ತಿರುವ ದಾಖಲೆ ಇಲ್ಲ. ಆದರೂ ಕುಡಿದಿದ್ದಾರೆ ಎಂದು ಹೇಗೆ ಹೇಳುತ್ತೀರಾ ಎಂದು ಪೊಲೀಸರು ರಘು ಜಾಣಗೆರೆ ಹಾಗೂ ಆತನ ಸ್ನೇಹಿತರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

ಇನ್ನೊಂದೆಡೆ ಠಾಣೆಯಲ್ಲಿ ಪೋಲಿಸರು ಹಲ್ಲೆ ನಡೆಸಿದರು ಎಂಬುದು ಜಾಣಗೆರೆ ಆರೋಪವಾಗಿದೆ. ಪಕ್ಷದ ಮುಖಂಡರ ಬಂಧನ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ಬೆಳಗ್ಗೆ ಠಾಣೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಸಿಪಿಐ ಗುರುಪ್ರಸಾದ್ ಹಾಗೂ ಪಿಎಸ್‌ಐ ವಿಕಾಸ್ ಗೌಡ ಸ್ಥಳಕ್ಕಾಗಮಿಸಿ, ದೂರು ನೀಡಿದ್ದೀರಿ, ಮೇಲಧಿಕಾರಿಗಳು ಕಾನೂನು ಪ್ರಕಾರ ಕ್ರಮಕೈಗೊಳ್ಳಲಿದ್ದಾರೆ. ಚುನಾವಣೆ ನೀತಿಸಂಹಿತೆ ಜಾರಿ ಇರುವ ಕಾರಣ ಇಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದರು. ಆಗ ಪಿಎಸ್‌ಐ ವಿಕಾಸ್‌ಗೌಡಗೆ ನೀನು ಪಿಎಸ್‌ಐ ಆಗಲು ಅನ್‌ಫಿಟ್ ಎಂದು ರವಿಕೃಷ್ಣಾರೆಡ್ಡಿ ಹೇಳಿದ್ದರಿಂದ ಪಿಎಸ್‌ಐ ಹಾಗೂ ರವಿಕೃಷ್ಣಾರೆಡ್ಡಿ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈ ಮೀರುವ ಹಂತ ತಲುಪಿತು. ಪೊಲೀಸರು ರವಿಕೃಷ್ಣಾರೆಡ್ಡಿ ಸೇರಿ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ನಂತರ ಠಾಣೆಯಲ್ಲಿ ಡಿವೈಎಸ್ಪಿ ಜಗದೀಶ್ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ : ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಪೊಲಿಸರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಮದ್ಯಪಾನ ಮಾಡಿದ ಪೊಲೀಸರನ್ನು ಅಮಾನತು ಮಾಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಜಗದೀಶ್, ಹಲ್ಲೆ ನಡೆಸಿರುವ ಪೊಲೀಸರ ಮೇಲೆ ಕ್ರಮಕ್ಕೆ ನ್ಯಾಯಾಲಯದ ಅನುಮತಿಗೆ ಅರ್ಜಿ ಸಲ್ಲಿಸಲಾಗಿದೆ. ಆದೇಶ ಬಂದ ಮೇಲೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರಾದ ನಿಂಗೇಗೌಡ, ಮೈಸೂರು ಸೋಮಸುಂದರ್, ಮಲ್ಲಿಕಾಜೂನ ಬೆಟ್ಟದಹಳ್ಳಿ, ವಿಜಯಕುವಾರ್, ಗದೇಂದ್ರ, ಗಂಗಮ್ಮ ಇದ್ದರು.

ತನಿಖೆ ಮಾಡದೆ ಅಮಾನತಿಗೆ ಖಂಡನೆ : ಖಾಸಗಿ ಸಮಯದಲ್ಲಿ ಪೊಲೀಸರು ವಾಹನದಲ್ಲಿ ಕುಳಿತಿದ್ದಾಗ ಕೆಲವರು ವಿಡಿಯೋ ವಾಡಿ ಬಲವಂತವಾಗಿ ನೀವು ಕುಡಿದಿದ್ದೀರಾ ಎಂದು ಕೇಳುತ್ತಾ ಅವರನ್ನು ಓಡಿಸಿಕೊಂಡು ಹೋಗಿದ್ದಾರೆ. ವಿಡಿಯೋದಲ್ಲಿ ಮದ್ಯಪಾನ ವಾಡುತ್ತಿರುವ ಪುರಾವೆ ಇಲ್ಲ. ಈ ಸಂಬಂಧ ಎಸ್ಪಿ ತನಿಖೆ ವಾಡದೆ ಅವಾನತು ವಾಡಿರುವುದು ಖಂಡನೀಯ ಎಂದು ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಚಾಲಕ ವಿ.ಶಿವಶಂಕರ್, ದಲಿತ ಮುಖಂಡರಾದ ಬಿ.ಡಿ.ಕುವಾರ್ ಎನ್.ರಾಜೇಶ್, ಪುರಸಭಾ ಸದಸ್ಯ ಆನಂದ್ ಕುವಾರ್ ಹೇಳಿಕೆ ನೀಡಿದ್ದು, ಅವಾನತು ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net