ಶ್ರೀಗಂಧ ಸಾಗಿಸುತ್ತಿದ್ದವರ ಬಂಧನ

mkg1a
Published on

ಹೊನ್ನಾಳಿ: ಚಿನ್ನಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧ ಮರ ಕಡಿದು ಸಾಗಿಸುತ್ತಿದ್ದ ಆರೋಪಿಯನ್ನು ಹೊನ್ನಾಳಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು ಶನಿವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿನ್ನಿಕಟ್ಟೆ ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಶ್ರೀಗಂಧ ಕಡಿದು ಸಾಗಿಸಲು ಯತ್ನಿಸಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದ್ದು, 13.5 ಕೆಜಿಯ ಮೂರು ತುಂಡುಗಳು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಎಂದು ಆರ್‌ಎಫ್‌ಒ ಚೇತನ್ ತಿಳಿಸಿದರು.

ಆರೋಪಿ ವಿರುದ್ಧ್ದ 1963ರ ಅನ್ವಯ 24,71(ಎ),8.87,104 ಪ್ರಕಾರ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಯರಗನಾಳ್ ಗ್ರಾಮದ ಶ್ರೀಗಂಧ ಬೆಳೆದಿರುವ ರೈತ ಚನ್ನೇಶಪ್ಪ ಮಾತನಾಡಿ, ನಾನು 10 ಎಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆದಿದ್ದು, ಕಳ್ಳರು ಈಗಾಗಲೇ ನೂರಾರು ಶ್ರೀಗಂಧ ಮರಗಳನ್ನು ಕದ್ದು ನಮಗೆ ಸಾಕಷ್ಟು ನಷ್ಟ ಮಾಡಿದ್ದರೆ ಎಂದರು.

ದಾಳಿಯಲ್ಲಿ ಡಿಆರ್‌ಎಫ್‌ಒ ಬರ್ಕತ್ ಆಲಿ, ಶಿವಯೋಗಿ, ಗಸ್ತು ಅರಣ್ಯ ಪಾಲಕರಾದ ಕೃಷ್ಣಮೂರ್ತಿ, ನಿಂಗರಾಜ್, ಅರಣ್ಯ ವೀಕ್ಷಕರಾದ ಪ್ರವೀಣ್, ಭೀಮಪ್ಪ, ಮೌನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net