ಕಾವೇರಿ ನದಿಯಲ್ಲಿ ಮುಳುಗಿ ಮೂವರು ಸಾವು

water acidernt
Published on


ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮದ ಕಾವೇರಿ ನದಿಯಲ್ಲಿ ಗುರುವಾರ ಸ್ನಾನಕ್ಕೆಂದು ತೆರಳಿದ ಮೂವರು ನೀರು ಪಾಲಾಗಿದ್ದಾರೆ.

ಚಿಕ್ಕತ್ತೂರು ಗ್ರಾಮದ ಶ್ರೀನಿವಾಸ್ ಆಲಿಯಾಸ್ ಅಪ್ಪು (23), ಹಕ್ಕೆ ಗ್ರಾಮದ ಸಚಿನ್ (25) ಮತ್ತು ಮುಳ್ಳುಸೋಗೆ ಗ್ರಾಮದ ಜನತಾ ಕಾಲನಿ ನಿವಾಸಿ ವಿನೋದ್ (25) ಮೃತರು.

ಐವರು ಸ್ನೇಹಿತರು ಕಾವೇರಿ ನದಿ ಬಳಿ ಕಾರು ನಿಲ್ಲಿಸಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಒಬ್ಬ ನೀರಿನ ಆಳ ಅರಿಯದೆ ಮುಳುಗಿದ. ಈತನನ್ನು ರಕ್ಷಿಸಲು ತೆರಳಿದ ಮತ್ತೊಬ್ಬ ಮುಳುಗುವುದನ್ನು ಕಂಡು ಅವನನ್ನು ರಕ್ಷಿಸಲು ಇನ್ನೊಬ್ಬ ಮುಂದಾದ ಸಂದರ್ಭ ಮೂವರೂ ಮುಳುಗಿ ಮೃತಪಟ್ಟರು. ಮೃತದೇಹ ಮೇಲೆತ್ತುವ ಕಾರ್ಯ ನಡೆಯುತ್ತಿದೆ. ಸ್ನೇಹಿತರೆಲ್ಲರೂ ಕಾರು ಚಾಲಕರು ಎಂದು ತಿಳಿದುಬಂದಿದೆ. ಕುಶಾಲನಗರ ಅಗ್ನಿಶಾಮಕ ದಳದ ಸಿಬ್ಬಂದಿ ಅಪ್ಪು ಮೃತದೇಹವನ್ನು ಗುರುವಾರ ಸಂಜೆ ನೀರಿನಿಂದ ಮೇಲೆತ್ತಿದರು. ಇನ್ನುಳಿದ ಎರಡು ಮೃತದೇಹದ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಡಿವೈಎಸ್ಪಿ ಗಂಗಾಧರಪ್ಪ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net