ಕಾಸರಗೋಡು ಕುಂಡಂಗುಳಿ ಹೊಳೆಯಲ್ಲಿ ಮುಳುಗಿ ಮೂವರು ಮೃತ್ಯು

Kasaragodu tragedy
Published on

ಕಾಸರಗೋಡು: ಕುಂಡಂಗುಳಿಯ ಹೊಳೆಯಲ್ಲಿ ಮುಳುಗಿ ದಂಪತಿ ಸೇರಿ ಮೂವರು ಮೃತಪಟ್ಟಿದ್ದಾರೆ.

ಕುಂಡಂಗುಳಿ ಗದ್ದೆಮೂಲೆ ನಿವಾಸಿ ಚಂದ್ರೋಜಿ ಎಂಬುವರ ಪುತ್ರ ನಿದಿನ್(38), ಅವರ ಪತ್ನಿ ದೀಕ್ಷಾ(30) ಹಾಗೂ ಸಂಬಂಧಿ ಮನೀಶ್(16) ಮೃತಪಟ್ಟವರು.

ಕುಂಡಂಗುಳಿ ತೋಣಿಕಡವು ಚೊಟ್ಟೆ ಎಂಬಲ್ಲಿ ಹೊಳೆಗೆ ಸ್ನಾನಕ್ಕಾಗಿ ಇಳಿದಿದ್ದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿದ್ದರೆನ್ನಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಿದಿನ್ ಇತ್ತೀಚೆಗಷ್ಟೇ ಊರಿಗೆ ಆಗಮಿಸಿದ್ದರು. ಸಂಬಂಧಿಕರೊಂದಿಗೆ ಸೋಮವಾರ ಮಧ್ಯಾಹ್ನ ಎರಿಞಿಪುಯ ಹೊಳೆ ನೋಡಲು ಆಗಮಿಸಿದ್ದರು.

ನಿದಿನ್ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಪತ್ನಿ ದೀಕ್ಷಾ ಆಯತಪ್ಪಿ ಹೊಳೆಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ನಿದಿನ್ ನೀರಿಗೆ ಧುಮುಕಿದ್ದರು. ಇಬ್ಬರೂ ಮುಳುಗೇಳುತ್ತಿರುವುದನ್ನು ಕಂಡು ಮನೀಶ್ ಕೂಡ ನೀರಿಗೆ ಹಾರಿದ್ದು, ಮೂರೂ ಮಂದಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದರು. ತಕ್ಷಣ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ನಾಗರಿಕರು ಸೇರಿ ಕಾರ್ಯಾಚರಣೆ ನಡೆಸಿದರೂ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಮೃತದೇಹ ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net