ಸೆಲ್ಫಿ ತೆಗೆದುಕೊಳ್ಳುವಾಗ ಜೇನುನೊಣಗಳ ದಾಳಿ, ಮೂವರು ನೀರು ಪಾಲು: ಒಬ್ಬ ಹುಡುಗ-ಹುಡುಗಿ ಪಾರು...

F
ಅಪಾಯದಿಂದ ಪಾರಾಗಿರುವ ಸಲ್ಮಾನ್​, ನತಾಶಾ.
Published on

ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳುವಾಗ ಜೇನುನೊಣಗಳು ದಾಳಿ ಇಟ್ಟಿದ್ದು, ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮೂವರು ನೀರುಪಾಲಾಗಿದ್ದರೆ, ಒಬ್ಬ ಯುವಕ ಹಾಗೂ ಒಬ್ಬಳು ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕಿರೇಸೂರು ಬಳಿಯ ಮಲಪ್ರಭಾ ಕಾಲುವೆ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಈ ದುರ್ಘಟನೆ ಸಂಭವಿಸಿದೆ. ಐವರು ಒಂದೆಡೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಜೇನುನೊಣಗಳು ದಾಳಿ ಇಟ್ಟಿವೆ. ಈ ವೇಳೆ ನತಾಶಾ ಭಂಡಾರಿ ಹಾಗೂ ಸಲ್ಮಾನ್ ಪಿಳ್ಳೈ ಪ್ರಾಣಾಪಾಯದಿಂದ ಪಾರಾಗಿದ್ದರೆ, ಇತರ ಮೂವರು ನೀರುಪಾಲಾಗಿದ್ದಾರೆ.

ಸ್ಥಳಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಧಾವಿಸಿದ್ದು, ನಾಪತ್ತೆಯಾಗಿರುವವರ ಶೋಧ ನಡೆಯುತ್ತಿದೆ. ಕಿರೇಸೂರು ಗ್ರಾಮಸ್ಥರ ನೆರವು ಪಡೆದು ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net