ಕೋಲಾರ: ಕೋಲಾರ ಹೊರವಲಯದ ಸಹಕಾರ ನಗರದ ಬಳಿ ಶನಿವಾರ ಮುಂಜಾನೆ ಆಡಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಅದೃಷ್ಟವಶಾತ್ ಬಜಾವ್ ಆಗಿದ್ದಾನೆ.
ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ ಬಸವರಾಜ್, ಕೋಲಾರ ಜಿಲ್ಲೆ ಬಂಗಾರಪೇಟೆಯ ನಿಶ್ಚಲ್ ಮೃತರು. ಬಂಗಾರಪೇಟೆಯ ಸಾಯಿ ಗಗನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹರ್ಷವರ್ಧನ್, ಬಸವರಾಜ್, ನಿಶ್ಚಲ್ ಮೂವರೂ ರೇವಾ ವಿವಿ ವಿದ್ಯಾರ್ಥಿಗಳು ಎಂಬ ಮಾಹಿತಿ ಲಭ್ಯವಾಗಿದ್ದು, ಸಾಯಿಗಗನ್ ಸಹೋದರಿಯ ಮದುವೆ ಆಮಂತ್ರಣ ಹಂಚಲು ಸ್ನೇಹಿತರೆಲ್ಲ ಕಾರಿನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ