

ರಾಯಚೂರು: ಹನುಮ ಜಯಂತಿ ನಿಮಿತ್ತ ಮೂರ್ತಿಗೆ ಅಭಿಷೇಕ ಮಾಡಲು ಕೃಷ್ಣಾ ನದಿಯಿಂದ ನೀರು ತರಲು ನಡೆದು ಹೋಗುತ್ತಿದ್ದವರ ಮೇಲೆ ಬೊಲೇರೋ ವಾಹನ ಹರಿದು ಮೂವರು ಮೃತಪಟ್ಟಿ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಜರುಗಿದೆ.
ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಯುವಕರು ಹನುಮ ಜಯಂತಿ ನಿಮಿತ್ತ ಗ್ರಾಮದಲ್ಲಿನ ಹನುಮ ದೇವಸ್ಥಾನದಲ್ಲಿನ ಮೂರ್ತಿಗೆ ಅಭಿಷೇಕಕ್ಕಾಗಿ ದೇವಸುಗೂರು ಹತ್ತಿರದ ಕೃಷ್ಣಾ ನದಿಯಿಂದ ನೀರು ತಲು 13 ಯುವಕರು ನಡೆದುಕೊಂಡು ಹೋಗುತ್ತಿದ್ದರು.
ಶಕ್ತಿನಗರ ಹತ್ತಿರದ ಮೈಸೂರು ಪೆಟ್ರೋ ಕೆಮಿಕಲ್ ಹತ್ತಿರದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕೋಳಿ ಸಾಗಿಸುತ್ತಿದ್ದ ಬೊಲೇರೋ ವಾಹನ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗ್ರಾಮದ ಅಯ್ಯನಗೌಡ (28), ಮಹೇಶ (22), ಉದಯಕುಮಾರ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ನಂತರ ಪರಾರಿಯಾಗಲು ಯತ್ನಿಸಿದ ತೆಲಂಗಾಣ ಮೂಲಕ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.