ಬೆಂಗಳೂರು ಕೃಷಿ ವಿ.ವಿ.ಗೆ ಮೂವರು ನಾಮ ನಿರ್ದೇಶನ

Published on

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಮೂವರು ಸದಸ್ಯರನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡಿದ್ದಾರೆ. ರಾಜ್ಯ ಸರ್ಕಾರದ ಶಿಫಾರಸಿನ ಅನ್ವಯ ಈ ನೇಮಕ ಮಾಡಲಾಗಿದೆ. ಆನೇಕಲ್‌ನ ಇಗ್ಗಲೂರು ಬಿ.ಎಸ್. ಉಲ್ಲಾಸ್ , ಟಿ. ನರಸೀಪುರ ತಾಲೂಕಿನ ಕೇತುಪುರ ದಿನೇಶ್ ಮತ್ತು ಯಲಹಂಕ ಉಪನಗರದ ಡಾ.ಎಂ. ಚಂದ್ರೇಗೌಡ ಅವರನ್ನು ಪ್ರಗತಿಪರ ರೈತರ ವರ್ಗದಲ್ಲಿ ಆಯ್ಕೆ ಮಾಡಲಾಗಿದೆ. ಇವರ ಅವಧಿ ಮೂರು ವರ್ಷಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net