

ಶಿಗ್ಗಾಂವಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮೂಲಕ ಸಾರಿಗೆ ಇಲಾಖೆಗೆ ಹೊಸ ರೂಪ ಕೊಟ್ಟಂತಾಗಿದೆ. ಬಡವರು ಆರ್ಥಿಕವಾಗಿ ಮುಂದುವರಿಯಲು ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಮುಂಚೂಣಿಗೆ ಬರಲು ಸಾಧ್ಯವಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಹೊಸ ಬಸ್ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಿಂದ ಶಾಲೆ- ಕಾಲೇಜುಗಳಿಗೆ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳ ಅನುಕೂಲವಾಗುವ ದೃಷ್ಟಿಯಿಂದ ಶಿಗ್ಗಾಂವಿ-ಸವಣೂರ ಸಾರಿಗೆ ಘಟಕಕ್ಕೆ ಮೂರು ಹೊಸ ಬಸ್ಗಳನ್ನು ಬಿಡಲಾಗಿದೆ. ಅಧಿಕಾರಿಗಳು ಅವಶ್ಯಕತೆ ಇರುವ ಹಳ್ಳಿಗಳಿಗೆ ಈ ಬಸ್ಗಳನ್ನು ಓಡಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಮುಂದಿನ ದಿನಗಳಲ್ಲಿ ಸಾರಿಗೆ ಸಚಿವರ ಜತೆ ಮಾತನಾಡಿ ಇನ್ನೂ ಹೆಚ್ಚಿನ ಬಸ್ಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದರು.
ಸುಭಾಸ ಮಜ್ಜಗಿ, ಗುಡ್ಡಪ್ಪ ಜಲದಿ, ಎಸ್.ಎಫ್. ಮಣಕಟ್ಟಿ, ಗೌಸಖಾನ್ ಮುನಸಿ, ಮಹಾಂತೇಶ ಸಾಲಿ, ಮಂಜುನಾಥ ಮನ್ನಣ್ಣನವರ, ಮಲ್ಲಮ್ಮ ಸೋಮನಕಟ್ಟಿ, ಶಿವಾನಂದ ಕುನ್ನೂರ, ಶಂಭು ನರ್ತಿ, ಮುನ್ನಾ ಲಕ್ಷೆ್ಮೕಶ್ವರ, ಫಿರೋಜ್ ಕಾಮನಹಳ್ಳಿ, ಶಿಗ್ಗಾಂವಿ ಸಾರಿಗೆ ನಿಯಂತ್ರಣಾಧಿಕಾರಿ ಆರ್.ಬಿ. ನದಾಫ, ಐ.ಎ. ವಡ್ಡರ, ಎಸ್.ಡಿ. ಕಲಾಲ, ಇತರರಿದ್ದರು.