

ಬೆಳಗಾವಿ: ಇಲ್ಲಿನ ಟಿಳಕವಾಡಿಯಲ್ಲಿ ಈಚೆಗೆ ನಡೆದಿದ್ದ ಗೀತಾ ರಂಜಿತ ದಾವಲೆಗವಳಿ ಕೊಲೆಗೆ ಸಂಬಂಧಿಸಿದಂತೆ ಆರೋಪಿಯ ಪತ್ನಿ ಮತ್ತು ಮಕ್ಕಳನ್ನೂ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಆಸ್ತಿ ವಿಚಾರವಾಗಿ ಗೀತಾಳನ್ನು ಮೈದುನ ಗಣೇಶ ದಾವಲೆಗವಳಿ ಸೆ.10ರಂದು ಈ ಕೊಲೆ ಮಾಡಿದ್ದನು. ಈತನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಇನ್ನೂ ಆರೋಪಿಗಳಿದ್ದು, ಅವರನ್ನು ಬಂಧಿಸುವಂತೆ ಆಗ್ರಹಿಸಿ ಹೋರಾಟ ನಡೆದಿತ್ತು. ಈಗ ಗಣೇಶ ಪತ್ನಿ ಸಹಿತ ಮಕ್ಕಳಾದ ಯಶ ಗವಳಿ (25), ಆದಿತ್ಯ ಗವಳಿ (20) ಅವರನ್ನು ಪೊಲೀಸರು ಬಂಧಿಸಿದ್ದಾರೆ.