ಮೂವರು ಪುರಸಭೆ ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ

06 may tnp 03
ತಿ.ನರಸೀಪುರ ಪುರಸಭೆಗೆ ನಾಮ ನಿರ್ದೇಶನಗೊಂಡ ಮೂವರನ್ನು ಸನ್ಮಾನಿಸಲಾಯಿತು. ಬಿ.ವಸಂತಾ ಶ್ರೀಕಂಠ, ಸಿ.ಪ್ರಕಾಶ್, ಎಂ.ರಮೇಶ್, ಎಂ.ಕೆ.ಸಹದೇವ, ಎಂ.ಮಿಥುನ್ ಇತರರು ಇದ್ದರು.
Published on

ತಿ.ನರಸೀಪುರ; ಪಟ್ಟಣದ ಪುರಸಭೆಗೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಮೂವರು ಸದಸ್ಯರನ್ನು ಅಧ್ಯಕ್ಷರ ಸಭಾಂಗಣದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ಹಳೇ ತಿರುಮಕೂಡಲು ಆರ್.ಚೇತನ್, ಜಿಎಸ್‌ಎಫ್ ಕಾಲನಿಯ ಕೆ.ಗಣೇಶ್ ಹಾಗೂ ಮುದ್ದಬೀರನಹುಂಡಿ ಗುರುಸ್ವಾಮಿ ಅವರನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಪುರಸಭೆಗೆ ಸರ್ಕಾರದ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಮೂವರನ್ನೂ ಪುರಸಭೆಗೆ ಸ್ವಾಗತಿಸಿ ಅಭಿನಂದಿಸಲಾಯಿತು. ನೂತನ ಮೂವರೂ ಸದಸ್ಯರು ಪುರಸಭೆಯನ್ನು ಅಧಿಕೃತವಾಗಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ತಾಪಂ ಮಾಜಿ ಸದಸ್ಯ ಎಂ.ರಮೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದಡಿ ಮೂವರನ್ನು ಪುರಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ನೂತನ ಸದಸ್ಯರು 23 ವಾರ್ಡ್‌ಗಳ ಜನರ ಸಮಸ್ಯೆಗಳ ಬಗ್ಗೆಯೂ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕು. ಅನುದಾನ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಿಎಂ ಹಾಗೂ ಸಚಿವರ ಗಮನಕ್ಕೆ ತರಬೇಕು ಎಂದು ಕಿವಿಮಾತು ಹೇಳಿದರು.ನೂತನ ಸದಸ್ಯ ಗುರುಸ್ವಾಮಿ ಮಾತನಾಡಿ, ಪಕ್ಷ ನಿಷ್ಠೆ ಮತ್ತು ಶ್ರಮ ಗುರುತಿಸಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದ ಸುನೀಲ್ ಬೋಸ್ ಅವರು ಪುರಸಭೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಬಿ.ವಸಂತಾ ಶ್ರೀಕಂಠ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಸಮುದಾಯ ಸಂಘಟಕ ಮಹದೇವ, ಸದಸ್ಯರಾದ ಎನ್.ಸೋಮಣ್ಣ, ಎಸ್.ಮದನ್‌ರಾಜ್, ಆರ್.ನಾಗರಾಜು, ಮಾಜಿ ಸದಸ್ಯ ರಾಘವೇಂದ್ರ, ಕಿರಗಸೂರು ಗ್ರಾಪಂ ಅಧ್ಯಕ್ಷ ಸಿ.ನಿಂಗರಾಜು, ಮುಖಂಡರಾದ ಕೆ.ಎನ್.ಪ್ರಭುಸ್ವಾಮಿ, ಹುಣಸೂರು ನಾಗರಾಜು, ಡಣಾಯಕನಪುರ ಸೋಮಣ್ಣ, ಎಂ.ಕೆ.ಸಹದೇವ, ಎಂ.ಮಿಥುನ್, ಶ್ರೀಕಂಠ, ಶ್ರೀಧರ, ಟಿ.ಸಿ.ಫಣೀಶ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net