ಮೂರು ಮತ್ತೊಂದು ನಾಟಕಗಳು ಬಿಡುಗಡೆ

29 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ಲೇಖಕಿ ಡಾ. ವೀಣಾ ಸಂಕನಗೌಡರ ಅವರ "ಮೂರು ಮತ್ತೊಂದು ನಾಟಕಗಳು' ಕೃತಿ ಬಿಡುಗಡೆಗೊಳಿಸಲಾಯಿತು.
ಪತ್ರಕರ್ತ ಸುಶೀಲೇಂದ್ರಾಚಾರ್ಯ ಕುಂದರಗಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ನಾಟಕಕಾತಿರ್ಯರಿದ್ದಾರೆ. ಈಗ ಡಾ. ವೀಣಾ ಸಂಕನಗೌಡರ ಆ ಸಾಲಿನಲ್ಲಿ ಸೇರ್ಪಡೆ ಆಗಿದ್ದಾರೆ. ಅವರು ತಮ್ಮ ನಾಟಕಗಳ ವಸ್ತುವಿನ ಆಯ್ಕೆಯಲ್ಲಿ ಇಂದಿನ ಕಾಲಮಾನಕ್ಕೆ ಅಪ್ಡೇಟ್​ ಆಗಿರುವುದು ಗಮನಾರ್ಹ ಎಂದರು.
ಕೃತಿ ಕುರಿತು ಡಾ. ಗುರುದೇವಿ ಹುಲ್ಲೆಪ್ಪನವರ ಮಾತನಾಡಿ, ಬಹುಮುಖ ವ್ಯಕ್ತಿತ್ವದ ಡಾ. ವೀಣಾ ಸಂಕನಗೌಡರ ನಾಟಕ ಕೃತಿ 4 ನಾಟಕಗಳನ್ನು ಹೊಂದಿದೆ. ಇವುಗಳಲ್ಲಿ ಲೇಖಕಿಯು ಸಾಮಾಜಿಕ ಏರುಪೇರುಗಳನ್ನು ತೋರಿಸುವುದರ ಜತೆಗೆ ಪರ್ಯಾಯ ಪರಿಹಾರವನ್ನೂ ನೀಡಿರುವುದು ವೀಣಾ ಅವರ ಸಮಾಜಮುಖಿ ಆಶಯ ತೋರುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರೊ. ಪಿ.ಎಸ್​. ಹಳ್ಯಾಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಲೇಖಕಿ ಡಾ. ವೀಣಾ ಸಂಕನಗೌಡರ ಅನಿಸಿಕೆ ಹಂಚಿಕೊಂಡರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ರೂಪಾ ಜೋಶಿ, ಉಷಾ ಗದ್ದಗಿಮಠ, ದತ್ತಿ ದಾನಿ ಡಾ. ಪ್ರೀತಿ ಜೀವಣ್ಣವರ, ಪ್ರೊ. ಅಯ್ಯನಗೌಡರ, ಮಹಾಂತೇಶ ಕತ್ತಿ, ಕಸಾಪ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂದ ಪದಾಧಿಕಾರಿಗಳು, ಇತರರು ಇದ್ದರು.
ಉತ್ತರ ಕರ್ನಾಟಕ ಲೇಖಕಿಯರ ಸಂದ ಉಪಾಧ್ಯಕ್ಷೆ ಡಾ. ಪ್ರಜ್ಞಾ ಮತ್ತಿಹಳ್ಳಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net