ಮೂರು ತಿಂಗಳ ಯೋಗ ತರಬೇತಿ

Published on

ಮೈಸೂರು: ರಾಮಕೃಷ್ಣ ನಗರದ ಪರಮಹಂಸ ಯೋಗ ಮಹಾ ವಿದ್ಯಾಲಯ, ಅಂತಾರಾಷ್ಟ್ರೀಯ ಯೋಗ ಶಾಲೆಗಳಿಂದ 3 ತಿಂಗಳ ವಿವಿಧ ತರಬೇತಿ ನೀಡಲಾಗುವುದು ಎಂದು ಮಹಾವಿದ್ಯಾಲಯದ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.

ಆಫ್‌ಲೈನ್‌ಹಾಗೂ ಆನ್‌ಲೈನ್‌ನಲ್ಲಿ ತರಬೇತಿ ನೀಡಲಿದ್ದು, ವಾರಾಂತ್ಯದ ದಿನಗಳಲ್ಲಿ ನಡೆಯಲಿದೆ. ನುರಿತ ಯೋಗ ತಜ್ಞರು ಹಾಗೂ ಪರಿಣಿತ ವೈದ್ಯರ ಮಾರ್ಗದರ್ಶನದಲ್ಲಿ ಯೋಗಾಸನ, ಯೋಗ ಥೆರಪಿ, ಪ್ರಾಣಾಯಾಮ, ಧ್ಯಾನ, ಮುದ್ರಾ ಕ್ರಮ, ಮನೆ ಮದ್ದು, ಜೀವನ ಕೌಶಲ್ಯ ಇತ್ಯಾದಿಗಳನ್ನು ಕಲಿಸಲಾಗುವುದು. ನ.8ರಿಂದ ತರಬೇತಿ ಪ್ರಾರಂಭವಾಗಲಿದೆ. ಪೂರ್ಣಗೊಳಿಸಿದವರಿಗೆ ಆಯುಷ್ ಇಲಾಖೆ ಪ್ರಮಾಣ ಪತ್ರ ನೀಡಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಯೋಜಕರಾದ ಡಾ.ಎಸ್.ಕಾವ್ಯ, ಯೋಗ ಪ್ರಕಾಶ್, ಸುಮನಾ, ವಿಜಯಕುಮಾರ್, ದೇವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net