ಮೂರು ತಿಂಗಳ ಗೌರವಧನ ಪಾವತಿಗೆ ಆಗ್ರಹಿಸಿ ಶಾಸಕ ಜೆ.ಎನ್.ಗಣೇಶ್‌ಗೆ ಅತಿಥಿ ಶಿಕ್ಷಕರ ಮನವಿ

230520 Kurugodu Guest Teachers Appeal to MLA Ganesh
Published on

ಕುರುಗೋಡು: ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಆರ್ಥಿಕ ಪ್ಯಾಕೇಜ್‌ನಲ್ಲಿ ಮೂರು ತಿಂಗಳ ಗೌರವಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಎಮ್ಮಿಗನೂರು ಗ್ರಾಮದ ಅತಿಥಿ ಶಿಕ್ಷಕರ ಸಂಘದಿಂದ ಶಾಸಕ ಜೆ.ಎನ್.ಗಣೇಶ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಗಣೇಶ್, ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಲಾಕ್‌ಡೌನ್‌ನಿಂದಅತಿಥಿ ಶಿಕ್ಷಕರ ಬದುಕು ಅತಂತ್ರವಾಗಿದೆ. ಅವರಿಗೆ ಆಹಾರದ ಕಿಟ್ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಅತಿಥಿ ಶಿಕ್ಷಕರಾದ ಎಸ್.ರಾಮು, ಎಚ್.ಮಲ್ಲೇಶ್, ಕೆ.ಶಿವರುದ್ರ, ಎ.ನಿರಂಜನ, ಕೆ.ಶ್ರೀನಿವಾಸ, ಸಿ.ಮಲ್ಲಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net