

ರಬಕವಿ-ಬನಹಟ್ಟಿ: ಎ ಮತ್ತು ಬಿ ಖಾತಾ ಆಂದೋಲನದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಪೌರಾಯುಕ್ತ ರಮೇಶ ಜಾಧವ ತಿಳಿಸಿದರು.
ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಇ-ಖಾತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಅಧಿಕೃತ ಆಸ್ತಿ ಮಾಲೀಕರು, ತಮ್ಮ ಆಸ್ತಿಗೆ ಸಂಬಂಧಿಸಿದ ಖರೀದಿ ಪತ್ರ, ದಾನಪತ್ರ, ವಿಭಾಗ, ಹಕ್ಕು, ಚಾಲ್ತಿಯಲ್ಲಿರುವ ಋಣಭಾರ, ನಿವೇಶನ ಬಿಡುಗಡೆ ಹಾಗೂ ನೀರಿನ ಕರ ರಸೀದಿ ಇತರ ಪೂರಕ ದಾಖಲೆಗಳೊಂದಿಗೆ ಹಾಗೂ ಸಮರ್ಪಕ ದಾಖಲೆಗಳಿಲ್ಲದ ಅನಧಿಕೃತ ನಿವೇಶನಗಳ ಮಾಲೀಕರೂ ನಗರಸಭೆ ಕಂದಾಯ ವಿಭಾಗಕ್ಕೆ ತೆರಳಿ ಅರ್ಜಿ ಸಲ್ಲಿಸಿ ಎ ಮತ್ತು ಬಿ ಖಾತಾ ಡಿಜಿಟಲ್ ಪತ್ರ ಪಡೆಯಬಹುದು ಎಂದರು.
ಇ-ಖಾತಾ ಪ್ರಕ್ರಿಯೆಗೆ ಮೂರು ತಿಂಗಳ ಕಾಲಾವಕಾಶವಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಿವಾನಂದ ಬುದ್ನಿ, ಅಭಿನಂದನ ಸೋನಾರ, ವಸಂತ ಪವಾರ, ಮುತ್ತಣ್ಣ ಚೌಡಕಿ, ಸುನೀಲ ಬಬಲಾದಿ, ಶಿವಪುತ್ರ ಮೂಡಲಗಿ, ಮುಜಾವರ ಮೊಕಾಶಿ ಇದ್ದರು.