ಹಲ್ಲೆ ಪ್ರಕರಣದಡಿ ಮೂವರು ಅಪ್ರಾಪ್ತರ ಬಂಧನ

Arrest
Published on

ಬೆಳಗಾವಿ: ಇಲ್ಲಿನ ಖಡೇಬಜಾರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮಾರ್ಕೇಟ್​ ಠಾಣೆ ಪೊಲೀಸರು ಕಾನೂನು ಸಂರ್ಷಕ್ಕೆ ಒಳಗಾದ ಮೂರು ಜನ ಬಾಲಕರನ್ನು ಬಂಧಿಸಿದ್ದಾರೆ.

ಹೊಸ ಗಾಂಧಿನಗರ 16 ವರ್ಷದ ಬಾಲಕನ ಮೇಲೆ ಜು.19ರಂದು ನಗರದ ಖಡೇಬಜಾರ ಪ್ರದೇಶದಲ್ಲಿ ರಾತ್ರಿ ಕವಡಿಫೀರ ಮೆರವಣಿಗೆ ಸಂದರ್ಭದಲ್ಲಿ ನೃತ್ಯ ಮಾಡುವ ಸಂದರ್ಭದಲ್ಲಿ ಕಾಲು ತಾಗಿದ್ದ ವಿಚಾರಕ್ಕೆ ಮೂವರು ಬಾಲಕರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಈ ಕುರಿತು ಶನಿವಾರ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದೆ ಎಂದು ಮಾರ್ಕೇಟ್​ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net