ಟಿಪ್ಪರ್ ಹರಿದು ಒಂದೇ ಕುಟುಂಬದ ಮೂವರ ಸಾವು

IMG-20240917-WA0218 (1)
ಮೃತ ದನೇಶ್ ಮತ್ತು ಪುತ್ರ ವಿಚ್ಚು
Published on

ಗುಂಡ್ಲುಪೇಟೆ: ಪಟ್ಟಣದ ಸುಲ್ತಾನ್ ಭತ್ತೇರಿ ರಸ್ತೆಯಲ್ಲಿ ಟಿಪ್ಪರ್ ಹರಿದು ಬೈಕಿನಲ್ಲಿ ಹೋಗುತ್ತಿದ್ದ ಮೂವರು ಧಾರುಣವಾಗಿ ಮೃತಪಟ್ಟಿದ್ದಾರೆ.
ಕೇರಳದ ವಯನಾಡ್ ಮೂಲದ ದನೇಶ(42)ಅನುಜಾ (37) ಹಾಗೂ ಅವರ ಮಗ ವಿಚ್ಚು(7) ಮೃತರು.

ಮಂಗಳವಾರ ಮಧ್ಯಾಹ್ನ ಪಟ್ಟಣದಿಂದ ವಯನಾಡ್ ಕಡೆಗೆ ದನೇಶ ಕುಟುಂಬ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಮಣ್ಣು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್ ಹರಿದ ಪರಿಣಾಮ ಮೂವರೂ ಸ್ಥಳದಲ್ಲಿ ಮೃತಪಟ್ಟರು. ಅಪಘಾತದ ರಭಸಕ್ಕೆ ದನೇಶ ಬೈಕ್ ಸಮೇತ ಚಕ್ರಕ್ಕೆ ಸಿಲುಕಿದರೆ, ಇನ್ನಿಬ್ಬರ ದೇಹಗಳು ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದವು. ಈ ದೃಶ್ಯ ಕಂಡ ಸಾರ್ವಜನಿಕರು ಮರುಕ ವ್ಯಕ್ತಪಡಿಸಿದರು.

ಕುಡಿದ ಮತ್ತಿನಲ್ಲಿ ಟಿಪ್ಪರ್ ಚಾಲನೆ ಮಾಡಿದ್ದರಿಂದ ದುರಂತ ಸಂಭವಿಸಿದ್ದು, ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net