

ಮೈಸೂರು: ನಗರದ ಪ್ರತಿಭಾನ್ವಿತ ಈಜುಪಟು ಎಸ್.ತಾನ್ಯಾ 67ನೇ ರಾಷ್ಟ್ರೀಯ ಶಾಲಾ ಈಜು ಸ್ಪರ್ಧೆಯಲ್ಲಿ ಚಿನ್ನ ಸೇರಿದಂತೆ ಮೂರು ಪದಕ ಪಡೆದಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಈಜು ಸ್ಪರ್ಧೆಯ 400 ಮೀಟರ್ ವೈಯಕ್ತಿಕ ಮಿಡ್ಲೆ(ಐಎಂ)ನಲ್ಲಿ ಚಿನ್ನ, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಹಾಗೂ 100*4 ಮೀಟರ್ ಮಿಡ್ಲೆ ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ರಾಷ್ಟ್ರ ಮಟ್ಟದ ಶಾಲಾ ಈಜು ಸ್ಪರ್ಧೆಯಲ್ಲಿ 3 ಪದಕ ಸಾಧನೆ ಮಾಡಿದ ಮೈಸೂರಿನ ಮೊದಲ ಮಹಿಳಾ ಈಜುಪಟು ಎನಿಸಿಕೊಂಡಿರುವ ತಾನ್ಯಾ, ಜೆ.ಪಿ.ನಗರ ಈಜು ಕೊಳದಲ್ಲಿ ಪಿ.ಪವನ್ ಕುಮಾರ್ ಅವರ ಬಳಿ ಅಭ್ಯಾಸ ನಡೆಸುತ್ತಿದ್ದಾರೆ.
ಜೆ.ಪಿ.ನಗರದ ಎಸ್.ಪಿ.ಷಡಕ್ಷರಿ ಮತ್ತು ಎನ್.ಶ್ವೇತಾ ದಂಪತಿಯ ಪುತ್ರಿಯಾದ ತಾನ್ಯಾ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.