

ರಾಮದುರ್ಗ: ನವಿಲುತೀರ್ಥ ಅಣೆಕಟ್ಟೆಯಿಂದ ನೀರು ಬಿಟ್ಟಿರುವುದರಿಂದ ಮಲಪ್ರಭಾ ನದಿ ತೀರದಲ್ಲಿರುವ ರಾಮದುರ್ಗದ ತೇರ ಬಜಾರದ ಹತ್ತಿರ ಇರುವ ಹಳೇ ಸೇತುವೆ, ಟಕನೂರ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ನಿರ್ಮಿಸಿದ ಬ್ರಿಡ್ಜ್ ಕಂ&ಬ್ಯಾರೇಜ್, ಸುರೇಬಾನದಿಂದ ಕುಳಗೇರಿಗೆ ಸಂಪರ್ಕ ಕಲ್ಪಿಸುವ ಹಂಪಿಹೊಳಿ ಹತ್ತಿರ ನದಿಗೆ ನಿರ್ಮಿಸಿದ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರಕ್ಕೆ ಪರದಾಡುವಂತಾಗಿದೆ.
ನದಿ ತೀರದಲ್ಲಿರುವ ಹೊಲಗಳಲ್ಲಿ ಬೆಳೆದ ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ಚೆಂಡು ಹೂ, ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗುವ ಆತಂಕದಲ್ಲಿ ರೆತರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಮದುರ್ಗ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ, ನವಿಲುತೀರ್ಥ ಜಲಾಶಯದಿಂದ ಸುಮಾರು 18 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಬಿಟ್ಟಲ್ಲಿ ಮಾತ್ರ ಜನವಸತಿ ಪ್ರದೇಶಕ್ಕೆ ತೊಂದರೆಯಾಗಲಿದೆ.
15 ಸಾವಿರ ಕ್ಯೂಸೆಕ್ವರೆಗೂ ನೀರು ಬಿಟ್ಟಲ್ಲಿ ಬೆಳೆ ಹಾನಿ ಸಂಭವಿಸಲಿದೆ. ತಾಲೂಕು ಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.