ಒಂದೇ ಮನೆಯ ಬಳಿ 3 ಕಾಳಿಂಗ ಸರ್ಪ; ಬಾವಿಯಲ್ಲಿ ಎರಡು, ಹಿತ್ತಲಲ್ಲಿ ಒಂದು...

1260521
Published on

ಉತ್ತರಕನ್ನಡ: ಯಾವುದಾದರೂ ಮನೆಯ ಬಳಿ ದೊಡ್ಡದೊಂದು ಕಾಳಿಂಗ ಸರ್ಪ ಕಾಣಿಸಿಕೊಂಡರೆ, ಅದನ್ನು ಹಿಡಿಸಿ ಬೇರೆಡೆಗೆ ಸಾಗಿಸುವವರೆಗೂ ನೆಮ್ಮದಿ ಇರುವುದಿಲ್ಲ. ಅಂಥದ್ದರಲ್ಲಿ ಇಲ್ಲೊಂದು ಕಡೆ ಒಂದೇ ದಿನ ಒಂದೇ ಮನೆಯ ಬಳಿ ಮೂರು ಕಾಳಿಂಗ ಸರ್ಪಗಳು ಕಾಣಿಸಿಕೊಂಡಿವೆ.

ಉತ್ತರಕನ್ನಡ ಜಿಲ್ಲೆಯ ಕುಮಟಾದ ಅಬ್ನೊಳ್ಳಿ ಹತ್ತಿರದ ರಾಮನಾಥ ನಾಯ್ಕ ಎಂಬವರ ಮನೆಯ ಬಳಿ ಇಂದು ಈ ಮೂರು ಕಾಳಿಂಗ ಸರ್ಪಗಳು ಕಂಡು ಬಂದಿವೆ. ಆ ಪೈಕಿ ಎರಡು ಬಾವಿಯೊಳಗಿದ್ದರೆ, ಇನ್ನೊಂದು ಹಿತ್ತಲಿನಲ್ಲಿ ಕಾಣಿಸಿಕೊಂಡಿತ್ತು.

ಒಟ್ಟೊಟ್ಟಿಗೆ ಮೂರು ಕಾಳಿಂಗ ಸರ್ಪಗಳನ್ನು ಕಂಡು ಆ ಮನೆಯವರಲ್ಲದೆ ಸುತ್ತಮುತ್ತಲ ಜನರು ಕಂಗಾಲಾಗಿದ್ದು, ರಕ್ಷಣೆಗಾಗಿ ಕೂಡಲೇ ಉರಗಪ್ರೇಮಿ ಪವನ್ ನಾಯ್ಕ ಎಂಬವರಿಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಬಾವಿಯಲ್ಲಿದ್ದ ಎರಡು ಮತ್ತು ಹಿತ್ತಲಿನಲ್ಲಿದ್ದ ಒಂದು ಸೇರಿ ಮೂರು ಕಾಳಿಂಗ ಸರ್ಪಗಳನ್ನು ಹಿಡಿದು, ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net